ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು: ಇ-ಟಿಕೆಟ್‌ಗೆ ಎಸ್‌ಎಂಎಸ್ ಸಾಕು

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈಲು ಪ್ರಯಾಣಕ್ಕೆ ಅಂತರ್ಜಾಲ ಮುಖೇನ ಸೀಟು ಕಾಯ್ದಿರಿಸುವ ಪ್ರಯಾಣಿಕರು ಇನ್ನು ಮುಂದೆ ಮುದ್ರಿತ ಟಿಕೆಟ್‌ಗೆ ಬದಲಾಗಿ ರೈಲ್ವೆ ವೆಬ್‌ಸೈಟ್‌ನಿಂದ ತಮ್ಮ ಮೊಬೈಲುಗಳಿಗೆ ಬರುವ ಟಿಕೆಟ್ ಕಾಯ್ದಿರಿಸುವಿಕೆ ಸಂದೇಶ (ಎಸ್‌ಎಂಎಸ್)ವನ್ನೇ ಅಧಿಕೃತ ಇ-ಟಿಕೆಟ್ ಎಂದು ಬಳಸಬಹುದಾಗಿದೆ.

ನೈರುತ್ಯ ರೈಲ್ವೆಯು ಈ ಕುರಿತು ಪ್ರಕಟಣೆ ನೀಡಿದೆ. ಅದರಂತೆ ಐಆರ್‌ಸಿಟಿಸಿಯಿಂದ ಬರುವ ಸಂದೇಶವನ್ನು ಟಿಕೆಟ್ ಆಗಿ ಬಳಸಬಹುದಾಗಿದೆ. ಈ ಸಂದೇಶವು ಪಿಎನ್‌ಆರ್ ಸಂಖ್ಯೆ, ಪ್ರಯಾಣಿಸುವ ರೈಲು ಸಂಖ್ಯೆ, ಪ್ರಯಾಣದ ದಿನಾಂಕ, ಪ್ರಯಾಣಿಕರ ಹೆಸರು ಹಾಗೂ ದರವನ್ನು ಒಳಗೊಂಡಿರುತ್ತದೆ.

ಇದರೊಟ್ಟಿಗೆ ತಮ್ಮ ಭಾವಚಿತ್ರ ಇರುವ ಗುರುತುಪತ್ರವನ್ನು ತಪಾಸಣೆಯ ಹಾಜರುಪಡಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT