ನವದೆಹಲಿ, (ಪಿಟಿಐ): ಪ್ರಸಕ್ತ 2011-12ರ ರೈಲ್ವೆ ಬಜೆಟ್ ನಲ್ಲಿ ರೈಲು ಪ್ರಯಾಣಿಕರ ಟಿಕೇಟ್ ದರ ಏರಿಸಿಲ್ಲ, ಸರಕು ಸಾಗಣೆಯ ವೆಚ್ಚದಲ್ಲೂ ಹೆಚ್ಚಳವಾಗಿಲ್ಲ. ಆದರೆ ಮುಂಗಡ ಬುಕ್ಕಿಂಗ್ ನಲ್ಲಿ ಸ್ವಲ್ಪ ಹೆಚ್ಚಳ ಮಾಡಲಾಗಿದೆ, ಹವಾನಿಯಂತ್ರಿತ ಬೋಗಿಗಳ ಪ್ರಯಾಣದ ಮುಂಗಡ ಟಿಕೇಟ್ ಮೇಲೆ 10 ರೂಪಾಯಿ, ಮುಂಗಡ ಸ್ಲೀಪರ್ ಟಿಕೇಟ್ ಗೆ 5 ರೂ ಹೆಚ್ಚಿಸಲಾಗಿದೆ.