ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ವಲಯ: ಸಮಿತಿ ರಚನೆ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೆಚ್ಚುವರಿ ರೈಲ್ವೆ ವಲಯ ಮತ್ತು ವಿಭಾಗಗಳ ರಚನೆಗೆ ಕೋರಿ ಸಲ್ಲಿಸಲಾಗಿರುವ ಪ್ರಸ್ತಾವನೆಗಳ ಪರಿಶೀಲನೆಗೆ ರೈಲ್ವೆ ಇಲಾಖೆಯು ದಶಕದ ನಂತರ ಆರು ಜನ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ.

 2009ರಿಂದ ಈಚೆಗೆ ವಿವಿಧ ರಾಜ್ಯಗಳು, ಸಂಸದರು ಹಾಗೂ ಶಾಸಕರು ಸಲ್ಲಿಸಿರುವ ಸುಮಾರು 30 ಪ್ರಸ್ತಾವನೆಗಳನ್ನು ನೂತನ ಸಮಿತಿ ಪರಿಶೀಲಿಸಲಿದೆ. ಅಲ್ಲದೆ, ಪ್ರಸ್ತಾವನೆಗಳಿಗೆ ಅನುಗುಣವಾಗಿ ವಲಯ ಮತ್ತು ವಿಭಾಗ ರಚನೆಯ ಕಾರ್ಯಸಾಧ್ಯತೆ, ಹಣಕಾಸು ಜಾರಿ, ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಅಧ್ಯಯನ ನಡೆಸಲಿರುವ ಸಮಿತಿಯು, ಮುಂದಿನ ಆರು ತಿಂಗಳಲ್ಲಿ ತನ್ನ ವರದಿ ಸಲ್ಲಿಸಲಿದೆ. ಸದ್ಯ ದೇಶದಲ್ಲಿ 17 ರೈಲ್ವೆ ವಲಯಗಳಿವೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT