ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಹೋರಾಟ ಸಮಿತಿ ದೆಹಲಿಗೆ

Last Updated 20 ಸೆಪ್ಟೆಂಬರ್ 2013, 6:47 IST
ಅಕ್ಷರ ಗಾತ್ರ

ಗದಗ: ಗದಗ–ವಾಡಿ ನೂತನ ರೈಲು ಮಾರ್ಗದ ಕಾಮಗಾರಿ ಶೀಘ್ರ ಆರಂಭಿಸುವುದು ಸೇರಿದಂತೆ ವಿವಿಧ ರೈಲೆ್ವ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈಲ್ವೆ  ಅಭಿವೃದ್ಧಿ ಹೋರಾಟ ಸಮಿತಿ ಅಕ್ಟೋಬರ್‌ ಮೊದ­ಲನೇ ವಾರ ದೆಹಲಿಗೆ ನಿಯೋಗ ತೆರಳಲಿದೆ.

ಗದಗ ಜಿಲಾ್ಲ ಕೇಂದ್ರವಾಗಿ ದಶಕಗಳ ಕಳೆದರೂ ಪ್ರಯಾಣಿಕರ ಅನುಕೂಲಕೆ್ಕ ತಕ್ಕಂತೆ ಸಮರ್ಪ­ಕವಾದ ಮೂಲ ಸೌಕರ್ಯ, ಹೊಸ ರೈಲು ಮಾರ್ಗ, ಅತಾ್ಯಧುನಿಕ ರೈಲೆ್ವ ನಿಲಾ್ದಣಗಳು ಇಲ್ಲ. ಜನಪ್ರನಿಧಿಗಳು ಹಾಗೂ ಪ್ರಮುಖರನು್ನ ಒಳಗೊಂಡ ನಿಯೋಗ ಮುಂದಿನ ತಿಂಗಳು ದೆಹಲಿಯಲಿ್ಲ ಕೇಂದ್ರ ರೈಲೆ್ವ ಸಚಿವ ಮಲಿ್ಲಕಾರ್ಜುನ ಖರ್ಗೆ ಅವರನು್ನ ಭೇಟಿ ಮಾಡಿ ಈ ಎಲ್ಲ ಬೇಡಿಕೆಗಳ ಕುರಿತು ಮನವರಿಕೆ ಮಾಡಿ­ಕೊಡಲಿದೆ ಎಂದು ಗುರುವಾರ ಪತಿ್ರಕಾ­ಗೋಷಿ್ಠ­ಯಲಿ್ಲ ಸಮಿತಿ ಅಧ್ಯಕ್ಷ  ನಿಸಾರ ಅಹ್ಮದ ಖಾಜಿ ತಿಳಿಸಿ­ದರು.

ಗದಗ– ವಾಡಿ, ಗದಗ-–ಹಾವೇರಿ ನೂತನ ರೈಲ್ವೆ ಮಾರ್ಗ ಶೀಘ್ರ ಪ್ರಾರಂಭಿಸುವುದು, ಗದಗ– ಮುಂಡ­ರಗಿ –ಹರಿಹರ ರೈಲ್ವೆ ಮಾರ್ಗ ಅನು­ಷ್ಠಾನಗೊಳಿಸುವುದು, ಗದಗ ರೈಲೆ್ವ ನಿಲ್ದಾಣವನ್ನು ವಿಶ್ವದರ್ಜೆ ನಿಲ್ದಾಣವನ್ನಾಗಿ ಪರಿವರ್ತಿಸಬೇಕು ಹಾಗೂ ಗದಗ ರೈಲು ನಿಲ್ದಾಣದಿಂದ ಸೋಲಾಪುರ ಗುಂತಕಲ್ಲ ಮೀರಜ್‌ ಕಡೆಗೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಪ್ಯಾಸೆಂಜರ್‌ ರೈಲು ಸೇವೆ ಒದಗಿಸಬೇಕು ಎಂದು ಒತಾ್ತಯಿಸಿದರು.

ಈಗಾಗಲೇ ರೈಲೆ್ವ ಬೇಡಿಕೆಗಳ ಬಗೆಗೆ ಮುಖ್ಯಮಂತಿ್ರ, ಕೇಂದ್ರ ಸಚಿವರು ಹಾಗೂ ಜಿಲಾ್ಲ ಉಸು್ತವಾರಿ ಸಚಿವರ ಗಮನಕೆ್ಕ ತರಲಾಗಿದೆ. ಆದರೆ ಯಾವುದು ಕಾರ್ಯ ರೂಪಕೆ್ಕ ಬಂದಿಲ್ಲ. ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಅಲ್ಲದೇ ಗದಗ ರೈಲು ನಿಲ್ದಾಣದಿಂದ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌, ಗೋವಾ, ಅಜ್ಮೀರ ಮುಂತಾದ ಪ್ರಮುಖ ನಗರಗಳಿಗೆ ರೈಲು ಸೌಕರ್ಯ ಕಲಿ್ಪಸಬೇಕು, ಪೂನಾದಿಂದ ಹುಬ್ಬಳ್ಳಿ, ಬೆಂಗಳೂರು, ಹುಬ್ಬಳ್ಳಿಯಿಂದ ಗದಗ, ಗುಂತಕಲ್ಲ, ಸಿಕಂದರಬಾದ ಸೋಲಾಪೂರ, ರೈಲು ಮಾರ್ಗಗಳಿಗೆ ವಿದು್ಯತ್‌ ರೈಲು ಕಲ್ಪಿಸುವುದು, ಹುಬ್ಬಳ್ಳಿ ಹತ್ತಿರವಿರುವ ಗದಗ ರೈಲೆ್ವ ಗೇಟ್‌ ಸೇರಿದಂತೆ ಗದಗ ಸುತ್ತಲಿನ ವರ್ತುಲ ರಸೆ್ತಗೆ ಸಂಪರ್ಕವಿರುವ ರೈಲೆ್ವ  ಮಾರ್ಗಗಳಿಗೆ ಮೇಲೆ್ಸತುವೆ  ನಿರ್ಮಾಣ ಹಾಗೂ ಗದಗ ರೈಲೆ್ವ ನಿಲ್ದಾಣ ಬಳಿ ಸರಕು ಸಾಗಾಣಿಕೆಯ ಬೃಹತ್‌ ನಿಲ್ದಾಣ ನಿರ್ಮಿಸುವಂತೆ ಅವರು ಆಗ್ರಹಿಸಿದರು.

ಅಂಧರ ಬಾಳಿಗೆ ಬೆಳಕು ನೀಡಿದ ಪದ್ಮಭೂಷಣ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಹೆಸರನ್ನು ರೈಲೊಂದಕ್ಕೆ ನಾಮಕರಣ  ಮಾಡಬೇಕು ಎಂದರು.

ಸಮಿತಿ ಉಪಾಧ್ಯಕ್ಷ ವಿಜಯ ಎಸ್. ಮುಳಗುಂದ, ಪ್ರಧಾನ ಕಾರ್ಯದರ್ಶಿ ಬಸವಣ್ಣೆಯ್ಯ ಎಸ್. ಹಿರೇಮಠ,  ಎನ್. ಕೆ. ಕೋರ್ಲಹಳ್ಳಿ,  ಸಿ. ಜಿ. ಬಿ. ಹಿರೇಮಠ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT