ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ಕೇಂದ್ರಗಳಾದ ಮಹಿಳಾ ಶೌಚಾಲಯಗಳು

Last Updated 18 ಸೆಪ್ಟೆಂಬರ್ 2013, 9:41 IST
ಅಕ್ಷರ ಗಾತ್ರ

ಕೂಡ್ಲಿಗಿ: ಪಟ್ಟಣದ ವಿವಿಧ ಕಡೆಗಳಲ್ಲಿರುವ ಮಹಿಳಾ ಶೌಚಾಲಯಗಳು ರೋಗ ಹರಡುವ ಕೇಂದ್ರಗಳಾಗಿ ಮಾರ್ಪಟ್ಟಿದ್ದು ಮಹಿಳೆಯರಿಗೆ ತೀವ್ರ ತೊಂದರೆಯಾಗಿದೆ.

ಶೌಚಾಲಯಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ, ನಿರ್ವಹಣೆ ಕಾಣದೆ, ಸೊಳ್ಳೆ ಹಂದಿಗಳ ಆವಾಸ ಸ್ಥಾನವಾಗಿ ಜಾಲಿ ಗಿಡಗಳು ಬೆಳೆದು, ಮಹಿಳೆಯರು ಬಯಲಲ್ಲೇ ಬಹಿರ್ದೆಸೆಗೆ ಹೋಗುವ ದುಸ್ಥಿತಿ ಉಂಟಾಗಿದೆ. ಪಟ್ಟಣದ ೧೬ ವಾರ್ಡ್‌ನಲ್ಲಿ  ಪೇಟೆಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ಸಾರ್ವಜನಿಕ ಮಹಿಳಾ ಶೌಚಾಲಯ ಅವ್ಯವಸ್ಥೆಯ ಆಗರವಾಗಿ, ರೋಗ- ರುಜಿನಗಳನ್ನು ಉತ್ಪನ್ನ ಮಾಡುವ ಕೇಂದ್ರವಾಗಿ ಮಾರ್ಪಟ್ಟಿದೆ. ಪಟ್ಟಣದ ವಿವಿಧ ಕಡೆ ಇರುವ ಮಹಿಳಾ ಶೌಚಾಲಯಗಳೂ ಇದಕ್ಕೆ ಹೊರತಾಗಿಲ್ಲ.

ಪಟ್ಟಣದಲ್ಲಿ ಅನೇಕ ವರ್ಷಗಳಿಂದ  ಮಹಿಳಾ ಬಯಲು ಶೌಚಾಲಯವಿದ್ದು ಸರಿಯಾದ ನಿರ್ವಹಣೆ ಇಲ್ಲದೆ, ಶೌಚಾಲಯದ ಕೊಠಡಿಗಳಿಗೆ ಬಾಗಿಲು ಇಲ್ಲದೆ, ಹಾಗೂ ನೀರಿನ ಸೌಲಭ್ಯ ಇಲ್ಲದೆ ದುರ್ವಾಸನೆ ಹೊರಹೊಮ್ಮುತ್ತಿದ್ದು, ಇಲ್ಲಿ ವಾಸಿಸುವ ಜನ  ನರಕಯಾತನೆ ಅನುಭವಿಸುವಂತಾಗಿದೆ.

‘ಶೌಚಾಲಯಗಳು ರೋಗ ಉತ್ಪತ್ತಿ ಕೇಂದ್ರಗಳಾಗಿ ಹಂದಿ, ಸೊಳ್ಳೆಗಳ ತಾಣಗಳಾಗಿ ಪರಿವರ್ತನೆಗೊಂಡಿವೆ. ಅಲ್ಲದೆ ಕನಿಷ್ಠ ಸೌಲಭ್ಯ, ನಿರ್ವಹಣೆ ಕಾಣದೆ ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡುತ್ತಿವೆ. ಈ ದುರವಸ್ಥೆಯನ್ನು ಸಂಬಂಧಿಸಿದ ಇಲಾಖೆಗಳು ಅರಿತು ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತೋರಿದಾ್ದರೆ’ ಎಂದು ಶಕುಂತಲಾ ಪ್ರಭಾಕರ ಹೇಳಿದರು.

ಗಾಳಿ ಬೀಸಿದ ದಿಕ್ಕಿನೆಡೆಗೆ ಶೌಚಾಲಯದ ದುರ್ಗಂಧ ಪಸರಿಸಲಿರುವುದರಿಂದ, ಈ ಶೌಚಾಲಯದ ಸುತ್ತ ಸುಮಾರು ೧೫೦ ಮೀ.ವರೆಗಿನ ಸುಮಾರು ೭೦ರಿಂದ ೮೦ ಮನೆಗಳು, ನೂರಾರು ಜನರು ಇದರ ಅಡ್ಡ ಪರಿಣಾಮಗಳಿಗೆ ಒಳಗಾಗುತ್ತಿದ್ದು, ಅನೇಕ ಬಾರಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದೂ ಇದೆ ಎಂದು ‘ವಂದೇಮಾತರಂ ಜನಜಾಗೃತಿ ವೇದಿಕೆ’ ನಗರ ಘಟಕದ ಘಟಕದ ಪದಾಧಿಕಾರಿಗಳಾದ ಬಾಣದ ಭಾಗ್ಯಮಾ್ಮ,   ಶಕುಂತಲಾ, ಬಸಮಾ್ಮ, ಈರಮಾ್ಮ, ಶಾರದಮಾ್ಮ, ಗೌರಮಾ್ಮ, ಮಲ್ಲಮಾ್ಮ, ಕೊಟ್ರಮ್ಮಾ ಮತ್ತಿತರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT