ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಕೆಸರು ಗದ್ದೆ ಓಟ

Last Updated 13 ಸೆಪ್ಟೆಂಬರ್ 2013, 9:28 IST
ಅಕ್ಷರ ಗಾತ್ರ

ಮುಂಡರಗಿ: ಇಂದಿನ ಮಕ್ಕಳು ದೈಹಿಕ ಶ್ರಮ ರಹಿತ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಕೆಸರು ಗದ್ದೆ ಯಂತಹ ವಿಶಿಷ್ಟ ಕ್ರೀಡೆಗಳು ಇಂದಿನ ಯುವ ಜನತೆಗೆ ತುಂಬಾ ಅಪರೂಪ ವಾಗಿವೆ. ಅವುಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಅಂತಹ ಕ್ರೀಡೆಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಬೇಕಿದೆ ಎಂದು ತಾಲೂಕು ಅಭಿವೃದ್ದಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಹೇಳಿದರು.

ಗಣೇಶ ಹಬ್ಬದ ಅಂಗವಾಗಿ ಬಸವ ಸಾಂಸ್ಕೃತಿಕ ವೇದಿಕೆ ಹಾಗೂ ಗೆಳೆಯರ ಬಳಗಗಳು ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಬಗೆಯ ಕೆಸರು ಗದ್ದೆ  ಕ್ರೀಡಾಕೂಟಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂಡರಗಿಯು ಮೊದಲಿ ನಿಂದಲೂ ತೀರಾ ಹಿಂದುಳಿದ ತಾಲ್ಲೂಕು ಎಂದು ಹಣೆ ಪಟ್ಟಿಕಟ್ಟಿ ಕೊಂಡಿದೆ. ಆದರೆ ಇಂದು ವಿವಿಧ ಕ್ಷೇತ್ರ ಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನರ ಗಮನ ಸೆಳೆಯುತ್ತಿದೆ. ಮುಂಬ ರುವ ದಿನಗಳಲ್ಲಿ ಮುಂಡರಗಿ ಪಟ್ಟಣ ದಲ್ಲಿ ಡಾನ್ಸ್ ರಿಯಾಲಿಟಿ ಶೋ ಹಾಗೂ ರಾಜ್ಯ ಮಟ್ಟದ ಟಗರಿನ ಸ್ಪರ್ಧೆ ಗಳನ್ನು ಏರ್ಪಡಿಸಲು ಪ್ರಯತ್ನಿಸಲಾ ಗುವುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿಕೊಂಡು ಮಾತ ನಾಡಿ ಬಸವ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹೇಮಂತಗೌಡ ಪಾಟೀಲ, ಅನೇಕ ದೇಶಿ ಕ್ರೀಡೆಗಳು ಮಾಯವಾಗುತ್ತಿರುವ ಈ  ಸಂಧರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಸಂಘಟನೆಯ ಉದ್ದೇಶವಾಗಿದೆ. ಆದ್ದರಿಂದ ವೇದಿಕೆಯ ಎಲ್ಲ ಗೆಳೆಯರು ಸೇರಿಕೊಂಡು ಇಂತಹ ದೇಶಿಕ್ರೀಡೆ ಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ.ಮೋಹನ, ನಾರಾ ಯಣಪ್ಪ ಇಲ್ಲೂರ, ಅಂದಪ್ಪ ಬೆಲ್ಲದ, ಗುಂಡಪ್ಪ ಅಂಗಡಿ, ಈಶ್ವರಪ್ಪ ಹಂಚಿನಾಳ, ರಮೇಶ  ಭೂಮರಡ್ಡಿ, ಎಚ್.ಎಸ್.ಪಾಟೀಲ, ಆನಂದಗೌಡ  ಪಾಟೀಲ, ದೃವಕುಮಾರ ಹೊಸಮನಿ, ಡಿ.ಡಿ.ಮೋರನಾಳ, ರಾಮಣ್ಣ ಬಳ್ಳಾರಿ, ಸೊಲಬಣ್ಣ ಜೋಬಾಳಿ, ಪಾಲಾಕ್ಷಿ ಗಣದಿನ್ನಿ, ಶ್ರೀನಿವಾಸ ಉಪ್ಪಿನಬೆಟಗೇರಿ, ಗುರುರಾಜ ಕಾಲವಾಡ, ಎನ್.ಟಿ. ಹುಬ್ಬಳ್ಳಿ, ಬಸವರಾಜ ರಾಮೇನಹಳ್ಳಿ, ಶಿವು ಬಾರಕೇರ. ಲಿಂಗರಾಜಗೌಡ ಪಾಟೀಲ, ಶೇಖರಾಜ ಹೊಸಮನಿ, ಶಿವು ನಾಡಗೌಡ್ರ ಮೊದಲಾದವರು ವೇದಿಕೆಯ ಮೇಲೆ ಹಾಜರಿದ್ದರು. ಎ.ಕೆ. ಮುಲ್ಲಾನವರ ನಿರೂಪಿಸಿದರು, ನಾಗೇಶ ಹುಬ್ಬಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT