ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಚಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು

ಪಾಕಿಸ್ತಾನಕ್ಕೆ ಸರಣಿ
Last Updated 6 ಜನವರಿ 2013, 14:21 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ) : ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯವನ್ನು 10 ರನ್‌ಗಳಿಂದ ರೋಚಕ ಗೆಲುವು ಪಡೆಯುವ ಮೂಲಕ ಭಾರತ ತಂಡವು ಕ್ಲೀನ್ ಸ್ವೀಪ್ ಅವಮಾನದಿಂದ ಪಾರಾಗಿದೆ.

ದೋನಿ ಪಡೆ ನೀಡಿದ 167 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನತ್ತಿದ್ದ ಪಾಕ್ ತಂಡ 48.5 ಒವರ್‌ಗಳಲ್ಲಿ 157 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸರಣಿಯ ಅಂತಿಮ ಪಂದ್ಯದಲ್ಲಿ ಪರಾಭವಗೊಂಡಿತು. ಆದರೆ 2-1 ರಿಂದ ಸರಣಿ ಪಾಕಿಸ್ತಾನದ ವಶವಾಯಿತು.

ಉತ್ತಮ ದಾಳಿ ನಡೆಸಿದ ವೇಗಿ ಇಶಾಂತ್ ಶರ್ಮಾ 3, ಭುವನೇಶ್ವರ್ ಕುಮಾರ್ ಮತ್ತು ಆರ್. ಅಶ್ವಿನ್ ತಲಾ 2 ವಿಕೆಟ್ ಕಬಳಿಸಿದರೆ, ಶಮಿ ಅಹ್ಮದ್ ಮತ್ತು ರವೀಂದ್ರ ಜಡೇಜ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಭಾರತ 43.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 167 ರನ್ ಪೇರಿಸಿತು.

ಪಾಕಿಸ್ತಾನದ ಆಕ್ರಮಣಕಾರಿ ಬಾಲಿಂಗ್ ದಾಳಿಗೆ ಸಿಲುಕಿದ ಭಾರತದ ಪ್ರಮುಖ ಆಟಗಾರರು ಪೆವಿಲಿನ್ ಪರೆಡ್ ನಡೆಸಿದರು. ಆದರೆ ಯುವರಾಜ್ (23) ರೈನಾ (31) ದೋನಿ ( 36) ಮತ್ತು ಕೊನೆಯಲ್ಲಿ ಜಡೇಜ (27)ರನ್ ಗಳಿಸುವ ಮೂಲಕ ಕುಸಿಯುತ್ತಿದ್ದ ತಂಡಕ್ಕೆ ನೆರವಾದರು. ದೋನಿ ಪಡೆ 43.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್:

ಭಾರತ 43.4 ಓವರ್ ನಲ್ಲಿ 167ಕ್ಕೆ ಆಲೌಟ್
ದೋನಿ 36, ರೈನಾ 31, 

ಪಾಕಿಸ್ತಾನ 48.5 ಓವರ್ ನಲ್ಲಿ 157ಕ್ಕೆ ಆಲೌಟ್
ಮಿಸ್ಬಾ 39, ಜಮ್ಷೆದ್ 34, 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT