ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣದಲ್ಲಿ ಹತ್ತು ಪೈಸೆಗೆ ಒಂದು ಲೀಟರ್ ಶುದ್ಧ ನೀರು

Last Updated 19 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ರೋಣ: ಈಗಾಗಲೇ ಮುಂದುವರಿದ ರಾಷ್ಟ್ರಗಳಾದ ಅಮೆರಿಕಾ ಇಂಗ್ಲೆಂಡ್, ಸಿಂಗಾಪುರ ರಾಷ್ಟ್ರಗಳಲ್ಲಿ ಜನತೆಗೆ ಯಾವ ರೀತಿಯಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆಯೊ ಅಂತಹ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಶುದ್ಧ ಕುಡಿಯುವ ನೀರಿನ ಪೂರೈಕೆ ಘಟಕವನ್ನು ರೈತ ಜಿ.ಎಚ್.ರಡ್ಡೇರವರು ರೋಣದ ಜನತೆಗೆ ನೀಡಿದ್ದಾರೆ ಎಂದು ರೋಣ ಗುಲಗಂಜಿಮಠದ ಗುರುಪಾದ ದೇವರು ಹೇಳಿದರು.

ಅವರು ಗುರುವಾರ, ಪಟ್ಟಣದ ಜಿ. ಎಚ್. ರಡ್ಡೇರವರ ಮನೆಯ ಆವರಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಜನತೆ ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ನೀರಿನ ದೋಷದಿಂದ ಉಂಟಾಗುವ ರೋಗಗಳಿಂದ ಮುಕ್ತರಾಗಿ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎನ್ನುವ ದಿಶೆಯಲ್ಲಿ ರಡ್ಡೇರರವರು ತಮ್ಮ ಸ್ವಂತ ಬಂಡವಾಳದಿಂದ ಇಂತಹ ಸಾಮಾಜಿಕ ಕಾರ್ಯಕ್ಕೆ ಇಳಿದಿರುವುದು ಶ್ಲಾಘನೀಯ. 

ಪಟ್ಟಣದ ಜನತೆ ಇದರ ಸೌಕರ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮಿಥುನ ಪಾಟೀಲ, ಪುರಸಭೆ ಉಪಾಧ್ಯಕ್ಷ ಹುಚ್ಚಪ್ಪ ನವಗುಂದ, ರಾಜಣ್ಣ ಹೂಲಿ, ಬಸವರಾಜ ಕೊಟಗಿ, ಎಂ.ಆರ್. ಗರಗ, ನಾಗಪ್ಪ ದೇಶಣ್ಣವರ, ಸಿದ್ದು ಪಾಟೀಲ, ಸಂಗು ನವಲಗುಂದ, ವೀರಣ್ಣ ಹೊರಕೇರಿ, ವೀರಯ್ಯ ಜಾವುರ, ಶರಣಪ್ಪ ಹವಳಪ್ಪನವರ, ಮಲ್ಲು ಪೂಜಾರ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT