ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹನ್‌ ಬೋಪಣ್ಣಗೆ ಸ್ಥಾನ

ಡೇವಿಸ್‌ ಕಪ್‌: ಚೀನಾ ತೈಪೆ ವಿರುದ್ಧದ ಪಂದ್ಯಕ್ಕೆ ಭಾರತ ತಂಡ
Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರೋಹನ್‌ ಬೋಪಣ್ಣ ಅವರು ಎರಡು ವರ್ಷಗಳ ಬಿಡುವಿನ ಬಳಿಕ ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಚೀನಾ ತೈಪೆ ವಿರುದ್ಧದ ಪಂದ್ಯಕ್ಕೆ ಭಾರತ ತಂಡವನ್ನು ಎಐಟಿಎ ಶನಿವಾರ ಪ್ರಕಟಿಸಿತು. ಚೀನಾ ತೈಪೆ ವಿರುದ್ಧದ ಏಷ್ಯಾ ಓಸೀನಿಯಾ ‘ಗುಂಪು 1’ರ ಪಂದ್ಯ ಇಂದೋರ್‌ನಲ್ಲಿ ಜನವರಿ 31 ರಿಂದ ನಡೆಯಲಿದೆ.

ಈ ವರ್ಷ ರಾಷ್ಟ್ರೀಯ ತಂಡದಲ್ಲಿ ಆಡುವುದಿಲ್ಲ ಎಂದು ತಿಳಿಸಿರುವ ಕಾರಣ ಲಿಯಾಂಡರ್ ಪೇಸ್‌ ಅವರನ್ನು ತಂಡಕ್ಕೆ ಪರಿಗಣಿಸಲಾಗಿಲ್ಲ. ಆದರೆ ಮಹೇಶ್‌ ಭೂಪತಿ ಅವರನ್ನು ಮತ್ತೆ ಕಡೆಗಣಿಸಲಾಗಿದೆ.

ಅನಿಲ್‌ ಧೂಪರ್‌ ನೇತೃತ್ವದ ಆಯ್ಕೆ ಸಮಿತಿ ಯುವ ಆಟಗಾರ ಸಾಕೇತ್‌ ಮೈನೇನಿಗೆ ಇದೇ ಮೊದಲ ಬಾರಿ ಡೇವಿಸ್‌ ಕಪ್‌ ತಂಡದಲ್ಲಿ ಸ್ಥಾನ ನೀಡಿದೆ. ಮೈನೇನಿ ಅವರು ರೋಹನ್‌ ಜೊತೆ ಡಬಲ್ಸ್‌ ವಿಭಾಗದಲ್ಲಿ ಆಡಲಿದ್ದಾರೆ. ಸೋಮದೇವ್‌ ದೇವವರ್ಮನ್‌ ಮತ್ತು ಯೂಕಿ ಭಾಂಬ್ರಿ ಸಿಂಗಲ್ಸ್‌ ವಿಭಾಗದಲ್ಲಿ ಆಡುವರು.

ಜೀವನ್‌ ನೆಡುಂಚೆಳಿಯನ್‌ ಮತ್ತು ಸನಮ್ ಸಿಂಗ್‌ ಹೆಚ್ಚುವರಿ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಯುವ ಆಟಗಾರ ರಾಮಕುಮಾರ್‌ ರಾಮನಾಥನ್‌ಗೆ ‘ವಿಶೇಷ ಆಹ್ವಾನಿತ’ ಆಟಗಾರನ ಸ್ಥಾನ ನೀಡಿ ಪಂದ್ಯದ ವೇಳೆ ತಂಡದ ಜೊತೆ ಇರಲು ಅವಕಾಶ ನೀಡಲಾಗಿದೆ.

ರೋಹನ್‌ 2012ರ ಏಪ್ರಿಲ್‌ನಲ್ಲಿ ಕೊನೆಯ ಬಾರಿ ಡೇವಿಸ್‌ ಕಪ್‌ ಪಂದ್ಯದಲ್ಲಿ ಆಡಿದ್ದರು. ಲಂಡನ್‌ ಒಲಿಂಪಿಕ್ಸ್‌ ಕೂಟಕ್ಕೆ ತಂಡದ ಅಯ್ಕೆಯ ವೇಳೆ ಅಶಿಸ್ತು ತೋರಿದ್ದಕ್ಕೆ ರೋಹನ್‌ ಮತ್ತು ಭೂಪತಿ ಮೇಲೆ ಎಐಟಿಎ ನಿಷೇದ ಹೇರಿತ್ತು. ಈ ಕಾರಣ ಹೋದ ವರ್ಷ ಕೊರಿಯಾ ಮತ್ತು ಇಂಡೊನೇಷ್ಯಾ ವಿರುದ್ಧದ ಪಂದ್ಯಗಳಲ್ಲಿ ರೋಹನ್‌ ಆಡಿರಲಿಲ್ಲ.

ತಂಡ ಹೀಗಿದೆ: ಸೋಮದೇವ್‌ ದೇವವರ್ಮನ್‌, ಯೂಕಿ ಭಾಂಬ್ರಿ, ರೋಹನ್‌ ಬೋಪಣ್ಣ ಮತ್ತು ಸಾಕೇತ್‌ ಮೈನೇನಿ

ಹೆಚ್ಚುವರಿ ಆಟಗಾರರು: ಜೀವನ್‌ ನೆಡುಂಚೆಳಿಯನ್‌, ಸನಮ್‌ ಸಿಂಗ್‌

ವಿಶೇಷ ಆಹ್ವಾನಿತ: ರಾಮಕುಮಾರ್‌ ರಾಮನಾಥನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT