ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಅರಸಯ್ಯ, ಸಹಚರರ ಬಂಧನ

Last Updated 15 ಡಿಸೆಂಬರ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರದ ಐದನೇ ಬ್ಲಾಕ್‌ನಲ್ಲಿ ರೌಡಿ ಶಿವಕುಮಾರ್ ಅಲಿಯಾಸ್ ಗುಂಡ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದ ಕುಖ್ಯಾತ ರೌಡಿ ಅರಸಯ್ಯ ಹಾಗೂ ಆತನ ಐದು ಮಂದಿ ಸಹಚರರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಲಕ್ಕಸಂದ್ರದ ಸುರೇಶ್‌ ಅಲಿಯಾಸ್ ಮರ್ಡರ್‌ ಸೂರಿ (36), ಗೊಟ್ಟಿಗೆರೆಯ ರವಿಪ್ರಕಾಶ್ (42), ಜಯನಗರದ ಮೈಕಲ್ ಡಿಸೋಜ (30), ಮಂಡ್ಯದ ನವೀನ್ ಕುಮಾರ್ (32) ಹಾಗೂ ಹೊಸಕೋಟೆಯ ಅಶೋಕ (28)
ಇತರೆ ಬಂಧಿತರು.

ಆರೋಪಿಗಳು ಡಿ.12ರ ರಾತ್ರಿ ಜಯನಗರದ ಐದನೇ ಬ್ಲಾಕ್‌ನಲ್ಲಿನ ಎಳನೀರು ವ್ಯಾಪಾರ ಮಾಡುವ ಸ್ಥಳದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಗುಂಡನ ಕೊಲೆಗೆ ಸಂಚು ರೂಪಿಸಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಖಾರದ ಪುಡಿ ಪೊಟ್ಟಣ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳ­ಲಾಗಿದೆ. ಜಯನಗರ ಮತ್ತು ಸುಬ್ರಮಣ್ಯಪುರ ಠಾಣೆಗಳ ರೌಡಿ ಪಟ್ಟಿಯಲ್ಲಿ ಅರಸಯ್ಯನ ಹೆಸರಿದೆ. ಈತನ ವಿರುದ್ಧ ಆರು ಕೊಲೆ, ಕೊಲೆಯತ್ನ, ಡಕಾಯಿತಿ, ದರೋಡೆ, ಅಪಹರಣ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ದ್ವೇಷದ ಹಿನ್ನೆಲೆಯಲ್ಲಿ ಗುಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೌಡಿ ಕಾಟ ರವಿ ಸಹಚರರ ಬಂಧನ: ಉದ್ಯಮಿಗಳನ್ನು ಗುರುತಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ
ರೌಡಿ ರವಿ ಅಲಿಯಾಸ್ ಕಾಟ ರವಿಯ ಮೂವರು ಸಹಚರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯಪುರ ಸಮೀಪದ ಗೌಡನಪಾಳ್ಯ ನಿವಾಸಿ ವಿಲ್ಸನ್‌ (30), ಮಲ್ಲತ್ತಹಳ್ಳಿಯ ಎಸ್. ವಸಂತಕುಮಾರ (34) ಹಾಗೂ ಚಿಕ್ಕಲಸಂದ್ರದ ರಾಘವೇಂದ್ರ (32) ಬಂಧಿತರು. ಆರೋಪಿಗಳು ಬನಶಂಕರಿ ಐದನೇ ಹಂತದ ಪೂರ್ಣಪ್ರಜ್ಞಾನಗರದಲ್ಲಿ ಕಾರು ನಿಲ್ಲಿಸಿಕೊಂಡು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT