ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್ತುಲ ರಸ್ತೆ ಸದ್ಬಳಕೆ ಆಗಲಿ

Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನಾಯಂಡಹಳ್ಳಿ-ಸುಮನಹಳ್ಳಿ ರಸ್ತೆಯು ಮೈಸೂರು -ಮಾಗಡಿ ಮುಖ್ಯ ರಸ್ತೆಗಳನ್ನು ಸಂಪರ್ಕಿಸುವ ಏಕೈಕ ರಸ್ತೆಯಾಗಿದ್ದು, ಸಂಚಾರಕ್ಕೆ ಮುಕ್ತಗೊಂಡು ಕೆಲ ವರ್ಷಗಳೇ ಕಳೆದಿವೆ. ಮುಖ್ಯವಾಗಿ ಇದು ನಾಗರಬಾವಿಯ ಎಲ್ಲ ಬಡಾವಣೆಗಳು ಹಾಗೂ ವಿಜಯನಗರ ಮುಖ್ಯ ಭಾಗಗಳನ್ನು ಸಂಪರ್ಕಿಸುತ್ತದೆ. ಹೊರವರ್ತುಲ ರಸ್ತೆಯಲ್ಲಿನ ಪ್ರಯಾಣದಲ್ಲಿ ಹೋಲಿಸಿದಾಗ 8-10 ಕಿಲೋಮೀಟರ್ ಉಳಿತಾಯವಾಗುತ್ತದೆ.

ಆದರೆ, ಇದುವರೆಗೂ ಈ ರಸ್ತೆಯನ್ನು ಮಹಾನಗರ ಸಾರಿಗೆ ವಾಹನಗಳನ್ನು ಓಡಿಸಲು ಬಳಸುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದು ಇದುವರೆಗೂ ತಿಳಿದಿಲ್ಲ.

ಆದ್ದರಿಂದ, ಈ ರಸ್ತೆಯ ಅನುಕೂಲಗಳನ್ನು ಈ ಭಾಗದ ಜನರಿಗೆ ತಲುಪಿಸಲು ಇದೀಗ ಸಕಾಲ. ನಾಯುಂಡಹಳ್ಳಿಯಿಂದ ಸುಮನಹಳ್ಳಿಗೆ ಗಂಟೆಗೊಮ್ಮೆ ಮಿನಿ ಬಸ್‌ಗಳನ್ನು ಚಾಲನೆಗೊಳಿಸಿದರೆ ಜನರಿಗೆ ಬಹಳ ಅನುಕೂಲವಾಗುತ್ತದೆ. ಮೇಲ್ಕಾಣಿಸಿದ ಸಲಹೆಗೆ ಮಹಾನಗರ ಸಾರಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸುವರೆಂದು ನಂಬಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT