ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ಎದುರು ಪಾಕ್‌ಗೆ ಜಯ

ಕ್ರಿಕೆಟ್‌: ಮಿಂಚಿದ ಶಾಹಿದ್‌ ಅಫ್ರಿದಿ
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದುಬೈ (ಎಎಫ್‌ಪಿ): ಆಲ್‌ರೌಂಡರ್‌ ಶಾಹಿದ್ ಅಫ್ರಿದಿ ಅವರ ಆಕ್ರಮಣಕಾರಿ ಆಟದ ನೆರವಿನಿಂದ ಪಾಕಿಸ್ತಾನ ತಂಡ ದ ವರು ಇಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಮೂರು ವಿಕೆಟ್‌ಗಳ ಗೆಲುವು ಸಾಧಿಸಿದರು.

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಂಕಾ ನೀಡಿದ 146 ರನ್‌ಗಳ ಗುರಿಯನ್ನು ಪಾಕ್‌ 19.1 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ತಲುಪಿತು.

ಅಫ್ರಿದಿ 20 ಎಸೆತಗಳಲ್ಲಿ ಅಜೇಯ 39 ರನ್‌ ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸಿಡಿಸಿದರು. ಶಾರ್ಜೀಲ್‌ ಖಾನ್‌ ಹಾಗೂ ಮೊಹಮ್ಮದ್‌ ಹಫೀಜ್‌ ಕೂಡ ಉಪಯುಕ್ತ ಕೊಡುಗೆ ನೀಡಿದರು.

ಮೊದಲು ಬ್ಯಾಟ್‌ ಮಾಡಿದ್ದ ಲಂಕಾ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 145 ರನ್‌ ಕಲೆಹಾಕಿತ್ತು. ಆ್ಯಂಜೆಲೊ ಮ್ಯಾಥ್ಯೂಸ್‌ ಅರ್ಧ ಶತಕ ಗಳಿಸಿದರು. 34 ಎಸೆತಗಳ ಅವರ ಆಟದಲ್ಲಿ ಒಂದು ಸಿಕ್ಸರ್‌ ಹಾಗೂ ಐದು ಬೌಂಡರಿಗಳಿದ್ದವು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ: 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 145 (ದಿನೇಶ್‌ ಚಾಂಡಿಮಲ್‌ 22, ಕುಮಾರ ಸಂಗಕ್ಕಾರ 21, ಆ್ಯಂಜೆಲೊ ಮ್ಯಾಥ್ಯೂಸ್‌ 50, ಲಾಹಿರು ತಿರಿಮಾನೆ ಔಟಾಗದೆ 23; ಸೊಹೇಲ್‌ ತನ್ವಿರ್‌ 34ಕ್ಕೆ2, ಸಯೀದ್‌ ಅಜ್ಮಲ್‌ 35ಕ್ಕೆ2);

ಪಾಕಿಸ್ತಾನ: 19.1 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 (ಶಾರ್ಜೀಲ್‌ ಖಾನ್‌ 34, ಮೊಹಮ್ಮದ್‌ ಹಫೀಜ್‌ 32, ಶಾಹಿದ್‌ ಅಫ್ರಿದಿ ಔಟಾಗದೆ 39; ಲಸಿತ್‌ ಮಾಲಿಂಗ 26ಕ್ಕೆ3). ಫಲಿತಾಂಶ: ಪಾಕ್‌ಗೆ ಮೂರು ವಿಕೆಟ್‌ ಜಯ ಹಾಗೂ ಸರಣಿಯಲ್ಲಿ 1–0  ಮುನ್ನಡೆ.

ಪಂದ್ಯ ಶ್ರೇಷ್ಠ: ಶಾಹಿದ್‌ ಅಫ್ರಿದಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT