ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ಜಯಕ್ಕೆ ಕಠಿಣ ಗುರಿ

ಕ್ರಿಕೆಟ್: ಗೆಲುವಿನ ಕನಸಲ್ಲಿ ಆಸೀಸ್
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹೋಬರ್ಟ್:  ಆಸ್ಟ್ರೇಲಿಯಾ ತಂಡ ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡದ ಗೆಲುವಿಗೆ 393 ರನ್‌ಗಳ ಗುರಿ ನೀಡಿದೆ.

ಬೆಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಸವಾಲು ಬೆನ್ನಟ್ಟಿರುವ ಲಂಕಾ ನಾಲ್ಕನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ 37 ಓವರ್‌ಗಳಲ್ಲಿ 2 ವಿಕೆಟ್‌ಗೆ 65 ರನ್ ಗಳಿಸಿತ್ತು. ಇದೀಗ ಪ್ರವಾಸಿ ತಂಡ ಅಂತಿಮ ದಿನ ಗೆಲ್ಲಲು 328 ರನ್ ಗಳಿಸಬೇಕಿದೆ.

ಇದಕ್ಕೂ ಮುನ್ನ ವಿಕೆಟ್ ನಷ್ಟವಿಲ್ಲದೆ 27 ರನ್‌ಗಳಿಂದ ಆಟ ಮುಂದುವರಿಸಿದ ಆಸೀಸ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 278 ರನ್‌ಗಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 131 ಓವರ್‌ಗಳಲ್ಲಿ 5 ವಿಕೆಟ್‌ಗೆ 450 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 73.5 ಓವರ್‌ಗಳಲ್ಲಿ 278 (ಎಡ್ ಕೋವನ್ 56, ಡೇವಿಡ್ ವಾರ್ನರ್ 68, ಮೈಕಲ್ ಕ್ಲಾರ್ಕ್ 57, ಮೈಕ್ ಹಸ್ಸಿ ಔಟಾಗದೆ 31, ರಂಗನಾ ಹೆರಾತ್ 96ಕ್ಕೆ 5).

ಶ್ರೀಲಂಕಾ: ಮೊದಲ ಇನಿಂಗ್ಸ್ 109.3 ಓವರ್‌ಗಳಲ್ಲಿ 336 ಮತ್ತು ಎರಡನೇ ಇನಿಂಗ್ಸ್ 37 ಓವರ್‌ಗಳಲ್ಲಿ 2 ವಿಕೆಟ್‌ಗೆ 65 (ದಿಮುತ್ ಕರುಣರತ್ನೆ 30, ಕುಮಾರ ಸಂಗಕ್ಕಾರ ಬ್ಯಾಟಿಂಗ್ 18, ಮಾಹೇಲ ಜಯವರ್ಧನೆ  ಬ್ಯಾಟಿಂಗ್ 5)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT