ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ತಂಡಕ್ಕೆ ಜಯಸೂರ್ಯ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಕೊಲಂಬೊ (ಐಎಎನ್‌ಎಸ್): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಲಂಕಾ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಅವರನ್ನು ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಕ್ರಿಕೆಟ್ ಸರಣಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ.

2007ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಜಯಸೂರ್ಯ ನಿವೃತ್ತಿ ಪ್ರಕಟಿಸಿದ್ದರು. 2009ರಲ್ಲಿ ಭಾರತ ವಿರುದ್ಧ ಆಡಿದ್ದ ಏಕದಿನ ಪಂದ್ಯವೇ ಜಯಸೂರ್ಯ ಅವರಿಗೆ ಕೊನೆಯ ಪಂದ್ಯವಾಗಿತ್ತು. 41 ವರ್ಷ ವಯಸ್ಸಿನ ಆಟಗಾರ ಸನತ್ ಜಯಸೂರ್ಯ ಅವರಿಗೆ ಮತ್ತೆ ತಂಡದಲ್ಲಿ ಸ್ಥಾನ ದೊರೆತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜೂನ್ 30ರಂದು ಜಯಸೂರ್ಯ 42ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹಿರಿಯ ಆಟಗಾರರೊಬ್ಬರು ಬಹಳಷ್ಟು ವರ್ಷಗಳ ನಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಹತ್ತನೇ ವಿಶ್ವಕಪ್ ಕ್ರಿಕೆಟ್ ಟೂರ್ನಿಯ 30 ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಜಯಸೂರ್ಯ ಕಾಣಿಸಿಕೊಂಡಿದ್ದರು. ಆದರೆ ಅಂತಿಮ 15 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಅವರು ವಿಫಲರಾಗಿದ್ದರು.

ಹೆಬ್ಬೆಟ್ಟಿಗೆ ಗಾಯ ಮಾಡಿಕೊಂಡಿರುವ ಏಕದಿನ ಕ್ರಿಕೆಟ್ ತಂಡದ ನಾಯಕ ತಿಲಕರತ್ನೆ ದಿಲ್ಯಾನ್ ಮೊದಲೆರೆಡು ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ. ವಿಶ್ವಕಪ್‌ನಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದಿರುವ ಉಪುಲ್ ತರಂಗ ಅವರನ್ನು ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಜಯಸೂರ್ಯ ಅವರನ್ನು ಲಂಕಾ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ. ಆದ್ದರಿಂದ ಜಯಸೂರ್ಯ ಅವರಿಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ಲಭಿಸುವ ಸಾಧ್ಯತೆಯಿದೆ. 

ಜೂನ್ 25ರಿಂದ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20, ಹಾಗೂ ಐದು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಜುಲೈ 11ರಿಂದ 13ರಂದು ಸ್ಕಾಟ್ಲೆಂಡ್ ಪ್ರವಾಸ ಬೆಳಸಲಿರುವ ಲಂಕಾ ಅಲ್ಲಿ ಎರಡು ಏಕದಿನ ಪಂದ್ಯಗಳನ್ನಾಡಲಿದೆ.

ಇಂಗ್ಲೆಂಡ್ ಪ್ರವಾಸದ ನಂತರ ನಿವೃತ್ತಿ: ಇಂಗ್ಲೆಂಡ್ ಪ್ರವಾಸದಿಂದ ಮರಳಿದ ನಂತರ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸುವುದಾಗಿ ಜಯಸೂರ್ಯ ಹೇಳಿದ್ದಾರೆ.

`ಇಂಗ್ಲೆಂಡ್ ಪ್ರವಾಸದ ನಂತರ ಎಲ್ಲಾ ವಿಭಾಗದ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಲಿದ್ದೇನೆ~ ಎಂದು ಯುನೈಟೆಡ್ ಪೀಪಲ್ ಫ್ರೀಡಂ ಅಲಯನ್ಸ್ ಪಕ್ಷದ ಸಂಸದರೂ ಆಗಿರುವ ಜಯಸೂರ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT