ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ತಂಡದ ವಿರುದ್ಧ ಅಭಿಮಾನಿಗಳ ಆಕ್ರೋಶ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ನಗರದ ರೇಸ್‌ಕೋರ್ಸ್ ರಸ್ತೆ ಭಾನುವಾರ ಬೆಳಿಗ್ಗೆ ಬಿಜೆಪಿಯ ಧುರೀಣದಿಂದ ಕಿಕ್ಕಿರಿದು ತುಂಬಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಪಕ್ಷದ ಸಚಿವರು, ಶಾಸಕರದ್ದೇ ಕಾರುಬಾರು!
ಇದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ 69ನೇ ಜನ್ಮದಿನ ಆಚರಿಸಿಕೊಂಡ ‘ಎಫೆಕ್ಟ್’!ಮುಂಜಾನೆಯ ವಾಕಿಂಗ್ ಬಳಿಕ ಶಿವನಿಗೆ ಪೂಜೆ ಸಲ್ಲಿಸಿದ ಯಡಿಯೂರಪ್ಪ ಅವರು ನಂತರ ತಮ್ಮ ಮೊಮ್ಮಕ್ಕಳು ಮತ್ತು ಕುಟುಂಬದ ಸದಸ್ಯರೊಂದಿಗೆ ಜನ್ಮದಿನದ ಸಂಭ್ರಮ ಹಂಚಿಕೊಂಡರು.

ನಂತರ ಸಚಿವರಾದ ಡಾ.ವಿ.ಎಸ್. ಆಚಾರ್ಯ, ಎಂ.ಪಿ. ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ, ಆರ್. ಅಶೋಕ, ಗೋವಿಂದ ಕಾರಜೋಳ ಮತ್ತಿತರರು ಮುಖ್ಯಮಂತ್ರಿಗಳಿಗೆ ಜನ್ಮದಿನದ ಶುಭಾಶಯ ಕೋರಿದರು. ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಜನ್ಮದಿನದ ಪ್ರಯುಕ್ತ ಅಭಿನಂದಿಸಿದರು.
ಅದಾಗಲೇ ತಮ್ಮ ನಿವಾಸದ ಎದುರು ನೆರೆದಿದ್ದ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರಿಂದ ಯಡಿಯೂರಪ್ಪ ಅವರು ಶುಭಾಶಯ ಸ್ವೀಕರಿಸಿದರು.

ನಂತರ ಬಿಎಂಟಿಸಿಗೆ ಸೇರಿದ ‘ವಜ್ರ’ (ವೋಲ್ವೊ) ಬಸ್‌ನಲ್ಲಿ ಯಡಿಯೂರಪ್ಪ ಅವರು ಸಚಿವರಾದ ವಿ.ಸೋಮಣ್ಣ, ಆರ್. ಅಶೋಕ, ಶೋಭಾ ಕರಂದ್ಲಾಜೆ ಮತ್ತಿತರರೊಂದಿಗೆ ನಗರದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿದರು. ದೇವಸ್ಥಾನದಿಂದ ಪೂರ್ವನಿಗದಿಯಂತೆ ಟಿಂಬರ್ ಯಾರ್ಡ್ ಬಡಾವಣೆಯ ಎಂಸಿಟಿ ಕೊಳೆಗೇರಿ ಪ್ರದೇಶಕ್ಕೆ ತೆರಳಿದ ಯಡಿಯೂರಪ್ಪ ಅವರು ಅಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸುತ್ತಿರುವ ನೂತನ ವಸತಿ ಸಂಕೀರ್ಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೊಳಗೇರಿ ಮಕ್ಕಳಿಗೆ ಕೇಕ್ ತಿನ್ನಿಸುವುದರ ಮೂಲಕ ಜನ್ಮದಿನದ ಸಂಭ್ರಮ ಹಂಚಿಕೊಂಡರು.
 ‘
ಕೃಷಿ ಬಜೆಟ್ ಅನುಕರಣೀಯ’
ಕೇಂದ್ರ ಸರ್ಕಾರ ಮತ್ತು ದೇಶದ ಇತರ ರಾಜ್ಯ ಸರ್ಕಾರಗಳು ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ನಾಡಿನ ರೈತರ ಬದುಕನ್ನು ಸುಧಾರಿಸುವುದು ಮತ್ತು ರಾಜ್ಯದ ಅಭಿವೃದ್ಧಿ ತಮ್ಮ ಹೆಗ್ಗುರಿ ಎಂದರು.ಜನ್ಮದಿನ ಆಚರಿಸಿಕೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಪ್ರಸಕ್ತ ಬಜೆಟ್ ಅಧಿವೇಶನ ಮುಗಿದ ನಂತರ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಭೇಟಿ ನೀಡಿ ಯೋಜನೆಗಳ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಎಂಬ ಬಗ್ಗೆ ಖುದ್ದು ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದರು. ‘ವಿಪಕ್ಷಗಳು ಹಿಂದಿನದೆಲ್ಲವನ್ನೂ ಮರೆತು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಿ, ಸಹಕಾರ ನೀಡಿದರೆ ನಾನೂ ವಿಪಕ್ಷಗಳನ್ನು ಗೌರವಿಸುತ್ತೇನೆ’ ಎಂದರು.
‘ಮತದಾರರೇ ಮಾಲೀಕರು’: ‘ಈ ನಾಡಿನ ಮತದಾರರು ನನ್ನ ಮಾಲೀಕರು. ಅವರು ತೊಂದರೆಯಿಲ್ಲದೆ ಬದುಕಬೇಕು. ಮುಂದಿನ ಎರಡೂವರೆ ವರ್ಷಗಳ ಕಾಲ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಹೆಚ್ಚಿನ ಒತ್ತು ನೀಡುವೆ’ ಎಂದು ಯಡಿಯೂರಪ್ಪ ತಿಳಿಸಿದರು.

ಸಂಪುಟ ವಿಸ್ತರಣೆ: ‘ಬಜೆಟ್ ಅಧಿವೇಶನ ಮುಗಿದ ನಂತರ ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡಲಾಗುವುದು, ವಿಸ್ತರಣೆ ದಿನಾಂಕವನ್ನೂ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ ನಂತರವೇ ನಿರ್ಧರಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT