ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ-ವಿಂಡೀಸ್ ಪಂದ್ಯಕ್ಕೆ ಮಳೆ ಅಡ್ಡಿ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳ ನಡುವಿನ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್ ಗೆದ್ದ ವಿಂಡೀಸ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿತು. ಶ್ರೀಲಂಕಾ 19 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದ್ದ ಸಂದರ್ಭ ಮಳೆ ಸುರಿಯಲಾರಂಭಿಸಿತು. ಆದ್ದರಿಂದ ಈ ಪಂದ್ಯ ಸೋಮವಾರ ಮುಂದುವರಿಯಲಿದೆ.

ಕೆಮರ್ ರೋಚ್ (19ಕ್ಕೆ 2) ಅವರು ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಲು ಯಶಸ್ವಿಯಾದರು. ಉಪುಲ್ ತರಂಗ ಮತ್ತು ಮಾಹೇಲ ಜಯವರ್ಧನೆ ಬೆನ್ನುಬೆನ್ನಿಗೆ ಔಟಾದರು. ಇಬ್ಬರೂ ತಲಾ ಏಳು ರನ್ ಗಳಿಸಿದರು. ದಿನೇಶ್ ಚಂಡಿಮಾಲ್ (2) ಕೂಡಾ ಬೇಗನೇ ಪೆವಿಲಿಯನ್‌ಗೆ ಮರಳಿದರು.

ಮಳೆಯಿಂದಾಗಿ ಆಟ ನಿಂತಾಗ ಕುಮಾರ ಸಂಗಕ್ಕಾರ ಹಾಗೂ ಲಾಹಿರು ತಿರಿಮನ್ನೆ ಕ್ರೀಸ್‌ನಲ್ಲಿದ್ದರು. ಈ ಸರಣಿಯಲ್ಲಿ ಎಲ್ಲ ಪಂದ್ಯಗಳಿಗೆ ಮೀಸಲು ದಿನವನ್ನು ಇರಿಸಲಾಗಿದೆ. ಆದ್ದರಿಂದ ಪಂದ್ಯ ಭಾನುವಾರ ನಡೆಯದಿದ್ದರೆ, ಸೋಮವಾರ ಮುಂದುವರಿಯಲಿದೆ.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 19 ಓವರ್‌ಗಳಲ್ಲಿ 3 ವಿಕೆಟ್‌ಗೆ 60 (ಉಪುಲ್ ತರಂಗ 7, ಮಾಹೇಲ ಜಯವರ್ಧನೆ 7, ಕುಮಾರ ಸಂಗಕ್ಕಾರ ಬ್ಯಾಟಿಂಗ್ 11, ಲಾಹಿರು ತಿರಿಮನ್ನೆ ಬ್ಯಾಟಿಂಗ್ 13, ಕೆಮರ್ ರೋಚ್ 19ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT