ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಕ್ಕಾಗಿ ರೂ.217 ಕೋಟಿ ತೆಗೆದಿರಿಸಿದ್ದ ಆಗಸ್ಟಾ ವೆಸ್ಟ್‌ಲ್ಯಾಂಡ್‌

Last Updated 14 ಫೆಬ್ರುವರಿ 2013, 11:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅತಿಗಣ್ಯರ ಹೆಲಿಕಾಪ್ಟರ್ ಪೂರೈಕೆ ಒಪ್ಪಂದ ಕುದುರಿಸುವ ನಿಟ್ಟಿನಲ್ಲಿ ಇಟಲಿ ಮೂಲದ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಕಂಪೆನಿ ಒಪ್ಪಂದದ ರೂ.3,600 ಕೋಟಿಯಲ್ಲಿ ಸುಮಾರು ರೂ. 217 ಕೋಟಿ ಹಣವನ್ನು  `ಭ್ರಷ್ಟ ಚಟುವಟಿಕೆ'ಗಾಗಿ ಬದಿಗಿರಿಸಿತ್ತು ಎಂದು ವರದಿಯೊಂದು ತಿಳಿಸಿದೆ.

ಇಟಲಿ ನ್ಯಾಯಾಲಯವೊಂದಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯೊಂದರ ಪ್ರಕಾರ ಹೆಲಿಕಾಪ್ಟರ್ ಪೂರೈಕೆ ಟೆಂಡರ್ ಪ್ರಕಟಣೆಯಲ್ಲಿನ ಮಾನದಂಡಗಳನ್ನು ಬದಲಾವಣೆ ಮಾಡಿ ಆ ಮೂಲಕ ತನ್ನ ಹೆಲಿಕಾಪ್ಟರ್‌ಗಳನ್ನು ಅರ್ಹಗೊಳಿಸುವ ಅಗತ್ಯಕ್ಕಾಗಿ ಹಾಗೂ ಮಧ್ಯವರ್ತಿಗೆ ಶೇ.7.5 ಕಮಿಷನ್ ನೀಡುವುದಕ್ಕಾಗಿ ರೂ. 217 ಕೋಟಿ ತೆಗೆದಿರಿಸಲಾಗಿತ್ತು. ಆದರೆ, ಅಂತಿಮವಾಗಿ ಅದು ರೂ.362 ಕೋಟಿ ತಲುಪಿತು ಎಂದು ತಿಳಿಸಲಾಗಿದೆ.

ಈ ಲಂಚದ ಹಣವು ಟ್ಯೂನಿಶೀಯಾ ಹಾಗೂ ಭಾರತದಲ್ಲಿ ನೊಂದಾಯಿಸಲ್ಪಟ್ಟ ಕಂಪೆನಿಗಳ ಮಧ್ಯ ಸಂದಾಯವಾಗುತ್ತಿತ್ತು. ಇದು ಈ ಹಗರಣ ಬೆಳಕಿಗೆ ಬಂದಾಗ `ಇನ್ನೂ ನಡೆಯುತ್ತಿತ್ತು' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫಿನ್‌ಮೆಕ್ಕಾನಿಕಾ ಗೈಸೆಪೆ ಒರ್ಸಿಯು ಹಾಗೂ ಆಗಸ್ಟಾ ವೆಸ್ಟ್‌ಲ್ಯಾಂಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಬ್ರೂನೋ ಸ್ಪ್ಯಾಂಗೋಲಿನಿ ಅವರು 30 ಮಿಲಿಯನ್ ಯೂರೊ (ರೂ.217 ಕೋಟಿ) ಹಣವನ್ನು ಮಧ್ಯವರ್ತಿಗಳಲ್ಲಿ ಪ್ರಮುಖರಾದ ಕ್ರಿಶ್ಚಿಯನ್ ಮೈಕೆಲ್ ಅವರಿಗೆ ನೀಡಿದ್ದರು ಎಂದು ವರದಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT