ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿ ಬಸವಣ್ಣನ ಪ್ರತಿಮೆ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಇಲ್ಲಿನ ಸಂಸತ್ ಭವನದ ಎದುರಿಗಿರುವ ಉದ್ಯಾನ ವೊಂದರಲ್ಲಿ ಭಾರತೀಯ ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಬಸವೇಶ್ವರ (ಬಸವಣ್ಣ) ಅವರ ಪ್ರತಿಮೆ ಪ್ರತಿಷ್ಠಾಪಿಸಲು 2.50 ಲಕ್ಷ ಪೌಂಡ್‌ಗಳನ್ನು ಒದಗಿಸಿಕೊಡು ವುದಾಗಿ ಲಂಡನ್‌ನ ಲ್ಯಾಂಬೆತ್ ಅನಿವಾಸಿ ಭಾರತೀಯ (ಎನ್‌ಆರ್‌ಐ) ಮೇಯರ್ ಭರವಸೆ ನೀಡಿದ್ದಾರೆ.

ಬ್ರಿಟನ್ ಮತ್ತು ಸಾಗರೋತ್ತರ ರಾಷ್ಟ್ರಗಳಲ್ಲಿರುವ ಭಾರತೀಯ ಸಮುದಾಯ ದವರು ಈ ಹಣ ಒದಗಿಸಲಿದ್ದು ಇದನ್ನು ಸಂಗ್ರಹಿಸಿ ಉದ್ಯಾನ ನಿರ್ವಾಹಕರಿಗೆ ತಲುಪಿಸುವ ಹೊಣೆಯನ್ನು ಲ್ಯಾಂಬೆತ್‌ನ ಮೇಯರ್ ಕರ್ನಾಟಕ ಮೂಲದ ಡಾ. ನೀರಜ್ ಪಾಟೀಲ್ ಹೊತ್ತಿದ್ದಾರೆ.

ಈ ಸಂಬಂಧದ ಪ್ರಸ್ತಾವನೆಯನ್ನು ಲ್ಯಾಂಬೆತ್ ಯೋಜನಾ ಸಮಿತಿಗೆ ಸಲ್ಲಿಸಿದ್ದು, ಅನುಮತಿ ಲಭಿಸಿದಲ್ಲಿ ಉದ್ಯಾನವನ್ನು ಅಭಿವೃದ್ಧಿಪಡಿಸುತ್ತಿರುವ 1600ರಲ್ಲಿ ನಿರ್ಮಾಣವಾದ ‘ವಾಕ್ಸ್‌ಹಾಲ್ ಪ್ಲೆಸರ್ ಸ್ಪ್ರಿಂಗ್ ಗಾರ್ಡನ್ಸ್’ ನಿರ್ವಹಣಾ ಸ್ನೇಹಿತರಿಗೆ ಹಸ್ತಾಂತರ ಮಾಡುವುದಾಗಿ ಕೌನ್ಸಿಲರ್ ನೀರಜ್ ತಿಳಿಸಿದ್ದಾರೆ.

ಪ್ರತಿಮೆಯು ಸುಮಾರು 3.5 ಅಡಿ ಎತ್ತರವಿರಲಿದ್ದು ಪೀಠದ ಮೇಲೆ ಇದನ್ನು ಪ್ರತಿಷ್ಠಾಪಿಸಲಾಗುತ್ತದೆ. ಜಾತಿ ವ್ಯವಸ್ಥೆ ಮತ್ತು ಲಿಂಗ ಅಸಮಾನತೆ ವಿರುದ್ಧ ಹೋರಾಡಿದ 12ನೇ ಶತಮಾನದ ‘ವೀರಶೈವ’ ಸಂತ ಬಸವಣ್ಣನವರ ಜನ್ಮಸ್ಥಳವಾದ ಬಸವಕಲ್ಯಾಣದಿಂದ 10 ಕಿ.ಮೀ. ದೂರದಲ್ಲಿರುವ ಕಮಲಾಪುರ ಗ್ರಾಮ ವೃತ್ತಿಯಲ್ಲಿ ಹೃದಯ ಸರ್ಜನ್ ಆಗಿರುವ ನೀರಜ್ ಅವರ ಹುಟ್ಟೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT