ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಯ1 ಪರೀಕ್ಷಾರ್ಥ ಹಾರಾಟ ಯಶಸ್ವಿ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಾಲ್ಸೊರ್ (ಒಡಿಶಾ) (ಪಿಟಿಐ): ಸ್ವದೇಶಿ ನಿರ್ಮಿತ ಚಾಲಕ ರಹಿತ ಯುದ್ಧ ವಿಮಾನ `ಲಕ್ಷ್ಯ1~ ಪರೀಕ್ಷಾರ್ಥ ಹಾರಾಟ ಬುಧವಾರ ಯಶಸ್ವಿಯಾಗಿ ನಡೆಯಿತು.

ಸಮೀಪದ ಚಂಡಿಪುರ ಪರೀಕ್ಷಾ ಕೇಂದ್ರದಲ್ಲಿ ಯುದ್ಧ ವಿಮಾನದ ಹಾರಾಟ ನಡೆಯಿತು. ಚಾಲಕ ರಹಿತ ಯುದ್ಧ ವಿಮಾನಕ್ಕೆ ಉನ್ನತ ತಂತ್ರಜ್ಞಾನದ ಡಿಜಿಟಲ್ ನಿಯಂತ್ರಣ ವ್ಯವಸ್ಥೆ ಹೊಂದಿರುವ ಎಂಜಿನ್ ಅಳವಡಿಸಲಾಗಿದ್ದು  ಇದು ಈ ವಿಮಾನದ ವಿಶೇಷ.

`ಸಾಮಾನ್ಯವಾಗಿ ಇಂಥ ಯುದ್ಧವಿಮಾನಗಳನ್ನು 30ರಿಂದ 35 ನಿಮಿಷಗಳ ಕಾಲ ಹಾರಾಟ ನಡೆಸಲಾಗುತ್ತದೆ. ಬುಧವಾರ ಈ ಯುದ್ಧ ವಿಮಾನದ ಪರೀಕ್ಷಾ ಹಾರಾಟದ ಸಮಯ ಹೆಚ್ಚಿಸುವುದರ ಜೊತೆಗೆ ಬೇರೆ ಬೇರೆ ಮಾನದಂಡಗಳನ್ನಿಟ್ಟುಕೊಂಡು ಪರೀಕ್ಷಿಸಲಾಯಿತು~ ಎಂದು ಮೂಲಗಳು ತಿಳಿಸಿವೆ.

`ಲಕ್ಷ್ಯ 1~ ಯುದ್ಧ ವಿಮಾನವನ್ನು ರಿಮೋಟ್ ಮೂಲಕ ನಿಯಂತ್ರಿಸಬಹುದಾಗಿದ್ದು, ವಾಯುಪಡೆಯ  ಪೈಲಟ್‌ಗಳಿಗೆ ತರಬೇತಿ ನೀಡಲು ಇದನ್ನು ಬಳಸಲಾಗುತ್ತದೆ. ಬೆಂಗಳೂರಿನ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ಚಾಲಕ ರಹಿತ ಯುದ್ಧ ವಿಮಾನ ಅಭಿವೃದ್ಧಿಪಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT