ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖನೌ: 28 ನಾಮಪತ್ರಗಳು ತಿರಸ್ಕೃತ!

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಖನೌ (ಐಎಎನ್‌ಎಸ್‌): ಶುಕ್ರವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ ಲಖನೌ ಲೋಕಸಭೆ ಕ್ಷೇತ್ರ ಒಂದರಲ್ಲೇ 28 ನಾಮಪತ್ರಗಳು ತಿರಸ್ಕೃತವಾಗಿವೆ.

‘ನಾಮಪತ್ರದಲ್ಲಿನ ಎಲ್ಲಾ ಅಂಕಣ­ಗಳನ್ನು ಭರ್ತಿ ಮಾಡಿರ­ಬೇಕು ಎಂದು ಸುಪ್ರೀಂಕೋರ್ಟ್‌ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ 28 ನಾಮಪತ್ರ­ಗಳಲ್ಲಿ ಹಲವು ಅಂಕಣಗಳು ಖಾಲಿ ಇರುವುದು ಪರಿಶೀಲನೆ ಸಂದರ್ಭ­ದಲ್ಲಿ ಕಂಡು­ಬಂದಿದೆ’ ಎಂದು ಜಿಲ್ಲಾ ಉಪ ಚುನಾವಣಾಧಿಕಾರಿ ಆರ್.ಕೆ.ಪಾಂಡೆ ಅವರು ಶನಿವಾರ ತಿಳಿಸಿದ್ದಾರೆ.

ಪರಿಶೀಲನೆ ಪೂರ್ಣಗೊಂಡ ಬಳಿಕ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಎಎಪಿ, ಬಿಎಸ್‌ಪಿ ಅಭ್ಯರ್ಥಿ­ಗಳಲ್ಲದೇ, 14 ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು, 10 ಪಕ್ಷೇತರ ಅಭ್ಯರ್ಥಿಗಳು ಸೇರಿ 29 ಜನ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT