ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತ್ ಅಶೋಕ್‌ಗೆ ಉದ್ಯಾನವೇ ಆಭರಣ!

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕುಮಾರಕೃಪಾ ರಸ್ತೆಯಲ್ಲಿರುವ ಹೋಟೆಲ್ ಲಲಿತ್ ಅಶೋಕಾದಲ್ಲಿರುವ ಉದ್ಯಾನ ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದೆ. ಹೋಟೆಲ್‌ನ ಉದ್ಯಾನ ಏಳನೇ ಬಾರಿಗೆ ‘ದಿ ಬೆಸ್ಟ್ ಆರ್ನಮೆಂಟಲ್ ಗಾರ್ಡನ್’ ಪ್ರಶಸ್ತಿ ಸಂದಿದೆ.

ಮೈಸೂರು ತೋಟಗಾರಿಕಾ ಸೊಸೈಟಿ ಪ್ರತಿವರ್ಷ ಏರ್ಪಡಿಸುವ ವಿಶೇಷ ತೋಟಗಾರಿಕಾ ಪ್ರದರ್ಶನದಲ್ಲಿ ‘ದಿ ಬೆಸ್ಟ್ ಗ್ರೀನ್ ಲ್ಯಾಂಡ್‌ಸ್ಕೇಪಿಂಗ್ ಅಂಡ್ ಮೇಂಟೇನೆನ್ಸ್’ ವಿಭಾಗದಲ್ಲಿ ಲಲಿತ್ ಅಶೋಕಾ ಈ ಬಾರಿಯೂ ತನ್ನ ಪ್ರಶಸ್ತಿಯನ್ನು ಕಾಯ್ದುಕೊಂಡಿದೆ.

‘ಹತ್ತು ಎಕರೆ ವ್ಯಾಪ್ತಿಯಲ್ಲಿರುವ ಈ ಹೋಟೆಲ್‌ನ ಏಳೂವರೆ ಎಕರೆಯಲ್ಲಿ ತೋಟಗಾರಿಕಾ ವಿಭಾಗವು ಉದ್ಯಾನವನ್ನು ನಿರ್ವಹಿಸುತ್ತಿದೆ. 100ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡ ಮರಗಳು ಇಲ್ಲಿವೆ. ಹೋಟೆಲ್‌ನ ಕೊಳಚೆ ನೀರು ಸಂಸ್ಕರಣಾ (ಎಸ್‌ಟಿಪಿ) ಘಟಕದಲ್ಲಿ ಸಂಸ್ಕರಿಸಿದ ನೀರನ್ನು ತೋಟದ ನಿರ್ವಹಣೆಗಾಗಿ ಬಳಸಲಾಗುತ್ತದೆ. ಎಸ್‌ಟಿಫ್ ಸ್ಲಡ್ಜ್ ಕೇಕ್‌ಗಳು ಸೇರಿದಂತೆ ವಿವಿಧ ಉತ್ಪಾದನೆಗಳನ್ನು ಹೋಟೆಲ್‌ನ ತೋಟಕ್ಕೆ ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ.

ತೋಟದಲ್ಲೇ ಸಂಗ್ರಹವಾಗುವ ಒಣ ಎಲೆ ಹಾಗೂ ಹಸಿರನ್ನು ಬಳಸಿ ಪರಿಸರಸ್ನೇಹಿ ಗೊಬ್ಬರ ತಯಾರಿಸಿ ಉಪಯೋಗಿಸಲಾಗುತ್ತದೆ. ನಮ್ಮ ಪರಿಶ್ರಮಕ್ಕೆ ಮತ್ತೆ ಮನ್ನಣೆ ಸಿಕ್ಕಿದೆ’ ಎಂದು ಹೋಟೆಲ್‌ನ ಎಕ್ಸಿಕ್ಯೂಟಿವ್ ಹೌಸ್‌ಕೀಪರ್ ಮಹಾಬಲೇಶ್ವರ ಶಾಸ್ತ್ರಿ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT