ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಗಿನ್

Last Updated 21 ಡಿಸೆಂಬರ್ 2010, 11:25 IST
ಅಕ್ಷರ ಗಾತ್ರ

ಇಂಟರ್‌ನೆಟ್: ಭಾರತಕ್ಕೆ 3ನೇ ಸ್ಥಾನ
ದೇಶದಲ್ಲಿ ಅಂತರ್‌ಜಾಲ ಜಾಲಾಡುವವರ ಸಂಖ್ಯೆ ಈಗ 100 ದಶಲಕ್ಷಕ್ಕೆ (10 ಕೋಟಿಗೆ) ಏರಿಕೆಯಾಗಿದ್ದು,   ಭಾರತ ಈಗ ಇಂಟರ್‌ನೆಟ್ ಬಳಕೆದಾರರ ವಿಷಯದಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. 300 ದಶಲಕ್ಷದಷ್ಟು (30 ಕೋಟಿ) ಬಳಕೆದಾರರು ಇರುವ ಚೀನಾ ಮೊದಲ ಸ್ಥಾನದಲ್ಲಿ ಮತ್ತು 20 ಕೋಟಿಗಳಷ್ಟಿರುವ ಅಮೆರಿಕ ದ್ವಿತೀಯ ಸ್ಥಾನದಲ್ಲಿ ಇದೆ ಎಂದು ಇಂಟರ್‌ನೆಟ್ ಮಾಹಿತಿ ಶೋಧ ತಾಣ ಗೂಗಲ್ ತಿಳಿಸಿದೆ.

ದೇಶದಲ್ಲಿ ಇಂಟರ್‌ನೆಟ್ ಬಳಸುವ 10 ಕೋಟಿ ಜಾಲಿಗರ ಪೈಕಿ 4 ಕೋಟಿ ಬಳಕೆದಾರರು ಮೊಬೈಲ್ ಮೂಲಕವೇ ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಮೊಬೈಲ್ ಮೂಲಕ ಇಂಟರ್‌ನೆಟ್ ಬಳಸುವವರ ಸಂಖ್ಯೆ ದಿನೇ ದಿನೇ ವ್ಯಾಪಕವಾಗಿ ಹೆಚ್ಚುತ್ತಿದೆ.

2007ರಲ್ಲಿ ಇಂತಹ ಗ್ರಾಹಕರ ಸಂಖ್ಯೆ ಕೇವಲ 20 ಲಕ್ಷದಷ್ಟಿದ್ದರೆ, ಈಗ  ಈ ಸಂಖ್ಯೆ 20 ಪಟ್ಟು ಹೆಚ್ಚಳಗೊಂಡಿದೆ. 2012ರಷ್ಟೊತ್ತಿಗೆ ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಮೂಲಕ ಇಂಟರ್‌ನೆಟ್ ಬಳಕೆದಾರರಿಗಿಂತ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಲಿದೆ ಎನ್ನುವ ಅಂದಾಜಿದೆ.

ಇಂಟರ್‌ನೆಟ್ ವ್ಯಸನಿಗಳು...
ಬ್ರಿಟನ್ನಿನ ಇಂಟರ್‌ನೆಟ್ ವ್ಯಸನಿಗಳು  ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಂತಹ ಸಾಮಾಜಿಕ ಸಂಪರ್ಕ ತಾಣಗಳನ್ನು ಪ್ರತಿ ದಿನ  ಸರಾಸರಿ  16 ನಿಮಿಷಗಳ ಕಾಲ ಹಾಸಿಗೆಯಲ್ಲಿಯೇ ಜಾಲಾಡುತ್ತಾರೆ. ಟ್ರಾವೆಲಾಡ್ಜ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಶೇ 70ರಷ್ಟು ವಯಸ್ಕರು ಮಲಗುವ ಕೋಣೆಯ ಹಾಸಿಗೆ ಮೇಲೆಯೇ  ಸಾಮಾಜಿಕ ಸಂಪರ್ಕ ತಾಣಗಳಲ್ಲಿ ತಮ್ಮ ವೈಯಕ್ತಿಕ ಮಾಹಿತಿಗಳನ್ನೆಲ್ಲ ನವೀಕರಿಸುತ್ತಾರೆ. ಬ್ರಿಟನ್ನಿನ ಜನತೆ ಪ್ರತಿ ದಿನ ರಾತ್ರಿ ತಮ್ಮ ಸ್ನೇಹಿತರು ಮತ್ತು ಹಿತೈಷಿಗಳಿಗೆ ಸಂದೇಶ ಕಳಿಸಲು ಸರಾಸರಿ 9 ನಿಮಿಷ ಕಳೆಯುತ್ತಾರೆ.

ಅನೇಕರು ತಮ್ಮ ಸೂಪರ್ ಮಾರ್ಕೆಟ್ ಶಾಪಿಂಗ್ ಅನ್ನೂ ಹಾಸಿಗೆಯಲ್ಲಿದ್ದುಕೊಂಡೇ ಪೂರ್ಣಗೊಳಿಸಿದರೆ,  ಶೇ 10ರಷ್ಟು ಜಾಲಿಗರು ಆನ್‌ಲೈನ್ ಪಾವತಿ ಮಾಡುತ್ತಾರೆ. ಬೆಳಿಗ್ಗೆ ಎದ್ದ ಕೂಡಲೇ ಇ-ಮೇಲ್ ಮತ್ತು ಮೊಬೈಲ್‌ನಲ್ಲಿನ ಸಂದೇಶ ನೋಡುವ ಪ್ರವೃತ್ತಿಯೂ ಅನೇಕರಲ್ಲಿ ಹೆಚ್ಚುತ್ತಿದೆ. ಶೇ 10ರಷ್ಟು ಜನರು ಹಾಸಿಗೆ ಬಿಟ್ಟು ಏಳುವ ಮೊದಲೇ ಸಂದೇಶಗಳಿಗೆ ಉತ್ತರ ನೀಡುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT