ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡೆನ್ ಕುಟುಂಬ ಸದ್ಯದಲ್ಲೇ ಸ್ವದೇಶಕ್ಕೆ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್, (ಪಿಟಿಐ): ಅಮೆರಿಕದ ಸೇನೆಯಿಂದ ಹತನಾದ  ಭಯೋತ್ಪಾದಕ ಬಿನ್ ಲಾಡೆನ್‌ನ ಮೂವರು ಪತ್ನಿಯರು ಮತ್ತು ಮಕ್ಕಳನ್ನು ಮರಳಿ ಸ್ವದೇಶಕ್ಕೆ ಕಳುಹಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಲಾಡೆನ್ ಪಾಕಿಸ್ತಾನದಲ್ಲಿ ತಂಗಿದ್ದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುತ್ತಿರುವ ಆಯೋಗ, ಭಯೋತ್ಪಾದಕನ ಪತ್ನಿ ಹಾಗೂ ಮಕ್ಕಳು ದೇಶ ತೊರೆಯದಂತೆ ವಿಧಿಸಿದ್ದ ನಿರ್ಬಂಧವನ್ನು ಹಿಂತೆಗೆದುಕೊಂಡಿರುವುದಾಗಿ ಇತ್ತೀಚೆಗೆ ಘೋಷಿಸಿದೆ. ಆಯೋಗದ ನಿರ್ಧಾರ ಘೋಷಣೆಯಾದ ಬೆನ್ನಲ್ಲೇ ಸರ್ಕಾರ ತರಾತುರಿಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. ಮೂವರು ಪತ್ನಿಯರಲ್ಲಿ ಇಬ್ಬರು ಸೌದಿ ಅರೇಬಿಯ, ಒಬ್ಬರು ಯೆಮನ್ ಪ್ರಜೆ.

ಲಾಡೆನ್ ಹತ್ಯೆಗೆ ಸಾಕ್ಷಿಯಾಗಿರುವ ಕುಟುಂಬದ ಸದಸ್ಯರು ಸ್ವದೇಶಕ್ಕೆ ಮರಳಿದ ನಂತರ ಮಾಧ್ಯಮಗಳ ಜೊತೆ ಮಾತನಾಡುವ ಆತಂಕ ಅಧಿಕಾರಿಗಳಿಗೆ ಎದುರಾಗಿದೆ. ಕುಟುಂಬದವರನ್ನು ಸದ್ಯಕ್ಕೆ ಮಾಧ್ಯಮಗಳಿಂದ ದೂರವಿರಿಸಿದರೂ, ಪಾಕಿಸ್ತಾನ ತೊರೆದ ನಂತರ ಅಂತರ್ಜಾಲ, ಫೇಸ್‌ಬುಕ್‌ಗಳಂತಹ ಸಾಮಾಜಿಕ ಸಂಪರ್ಕ ಜಾಲಗಳಿಂದ ಅವರನ್ನು ದೂರ ಇರಿಸುವುದು ಕಷ್ಟ ಎಂದು ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT