ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡ್‌ಗೆ ಟಿಕೆಟ್ ವಿಳಂಬ: ಸಾಮೂಹಿಕ ರಾಜೀನಾಮೆ ಬೆದರಿಕೆ

Last Updated 8 ಏಪ್ರಿಲ್ 2013, 6:49 IST
ಅಕ್ಷರ ಗಾತ್ರ

ಕಲಘಟಗಿ: ಹಾಲಿ ಶಾಸಕ ಸಂತೋಷ್ ಲಾಡ್ ಅವರಿಗೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಇಲ್ಲಿನ ಯುವ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್  ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ತಳ್ಳಿಹಾಳ, ಪಕ್ಷವು ಸಂತೋಷ ಲಾಡ ಅವರಿಗೆ ಟಿಕೆಟ್ ನೀಡಲು ವಿಳಂಬ ಧೋರಣೆ ಅನುಸರಿಸಿದಲ್ಲಿ,  ಯುವ ಘಟಕದ ಪದಾಧಿಕಾರಿಗಳೆಲ್ಲರೂ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಕಳೆದ ಬಾರಿ ಜಿಲ್ಲೆಯಲ್ಲಿ ಪಕ್ಷದ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದ ಲಾಡ್ ಅವರಿಗೆ ಟಿಕೆಟ್ ನೀಡದಿರುವುದು ಖಂಡನೀಯ ಎಂದರು. ರಾಜೀನಾಮೆ ನಿರ್ಧಾರವನ್ನು ಸಂತೋಷ ಲಾಡ್ ಕ್ಷೇತ್ರಕ್ಕೆ ಆಗಮಿಸಿದ ನಂತರ ಅವರೊಂದಿಗೆ ಚರ್ಚಿಸಿ ಪ್ರಕಟಿಸುವುದಾಗಿ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ  ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಶ್ರೀನಿವಾಸ ಕಂಪ್ಲಿ, ಪ್ರಧಾನಕಾರ್ಯದರ್ಶಿ ನಾಗರಾಜ ಬಂಡಿ, ಮಂಜುನಾಥ ಉಳ್ಳಾಗಡ್ಡಿ, ದಸ್ತಗೀರ ಹುಣಶಿಕಟ್ಟಿ, ವಿನಾಯಕ ಕುರುಬರ, ಶಿವಾನಂದ ಕಳಸಗೌಡ್ರ, ಅಜಿತ ಬೆಳಗಾಂವಕರ, ಗುರು ಕಂಪ್ಲಿ, ಬಾಬು ಅಂಚಟಗೇರಿ, ಶಂಕರ ಹಿರೇಮಠ, ಚನ್ನಬಸಪ್ಪ ಹವಳಕೊಂಡ, ಬಸವರಾಜ ಲಮಾಣಿ, ಬಾನು ಲಮಾಣಿ, ಅಶೋಕ ಶೆಟ್ಟಿ, ಸೋಮು ಹಡಪದ, ಎಸ್.ಎಸ್.ಕುರುಬರ ಹಾಜರಿದ್ದರು.

ಕಾಂಗ್ರೆಸ್‌ನಿಂದಲೇ ಸ್ಪರ್ಧೆ: ಲಾಡ್

ಕಲಘಟಗಿ: ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ದೊರೆಯುವ ಭರವಸೆ ಇದ್ದು, ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಯೋಚಿಸಿಲ್ಲ ಎಂದು ಶಾಸಕ ಸಂತೋಷ ಲಾಡ್ ಪತ್ರಿಕೆಗೆ ತಿಳಿಸಿದರು.

ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಲಾಡ್ ಬೇರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ವದಂತಿ ತಳ್ಳಿ ಹಾಕಿದರಲ್ಲದೇ, ಪಕ್ಷ ಟಿಕೆಟ್ ನೀಡಲು ನಿರಾಕರಿಸಿದಲ್ಲಿ ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದಲ್ಲಿಯೇ ಮುಂದುವರಿಯು ತ್ತೇನೆ ಎಂದು ತಿಳಿಸಿದರು.

ಈ ಕುರಿತು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗೊಂದಲಕ್ಕೊಳಗಾಗಿರುವುದು ಸಹಜ ವಾಗಿದ್ದು, ತಾಳ್ಮೆ ಯಿಂದ ಸಹಕರಿಸಲು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT