ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ತರುವ ಮೊಲ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಕೋಳಿ ಸಾಕಣೆಯಷ್ಟೆ ಜನಪ್ರಿಯಗೊಳ್ಳುತ್ತಿದೆ ಮೊಲ ಸಾಕಾಣಿಕೆ. ಮಹಿಳೆಯರಿಗೆ ಹೇಳಿ ಮಾಡಿಸಿದ ಕಸುಬು ಇದು. ಮನೆಯಲ್ಲಿದ್ದುಕೊಂಡೇ ಸ್ವ ಉದ್ಯೋಗ ಕೈಗೊಂಡು ಸಾಕಷ್ಟು ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಾಗರತ್ನ ನಾಯಕ್.

ಇಪ್ಪತ್ತು ಮೊಲಗಳಿಂದ ಆರಂಭವಾದ ಸಾಕಣೆ ಇದೀಗ 80ರ ಗಡಿ ದಾಟಿದೆ. ಮೊಲ ಸಾಕಣೆಯ ಕುರಿತು ಮಾಹಿತಿ, ಮಾರ್ಗದರ್ಶನದೊಂದಿಗೆ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸಿದ ಹೆಗ್ಗಳಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದು.

ಆರಂಭದಲ್ಲಿ ಕುಂದಾಪುರ, ಬೆಂಗಳೂರಿನಿಂದ ಮರಿಗಳನ್ನು ಖರೀದಿಸಿ ತಂದಿದ್ದಾರೆ. ಮೂರು ಸಾವಿರ ರೂಪಾಯಿ ವೆಚ್ಚದಲ್ಲಿ ಮೊಲಗಳಿಗೆ ಬೇಕಾದ ಗೂಡನ್ನು ತಯಾರಿಸಿದ್ದಾರೆ. ತೌಡು, ತರಕಾರಿ, ಮಾರುಕಟ್ಟೆಯಲ್ಲಿ ವ್ಯರ್ಥವಾಗುವ ಹೂಕೋಸನ್ನು ತಂದು ಇವುಗಳಿಗೆ ಆಹಾರವಾಗಿ ನೀಡುತ್ತಾರೆ. 

`ಮನೆ ಕೆಲಸದೊಂದಿಗೆ ಬಿಡುವಿನ ವೇಳೆಯಲ್ಲಿ ಇವುಗಳ ಕೆಲಸದಲ್ಲಿ ತೊಡಗಬಹುದು. 80 ಮೊಲ ಸಾಕಣೆಗೆ ಎಲ್ಲಾ ಖರ್ಚು ವೆಚ್ಚ ಸೇರಿ 60 ಸಾವಿರ ರೂಪಾಯಿ ಖರ್ಚು ತಗಲುತ್ತದೆ ಇನ್ನು ಯಾವುದೇ ಕಾರಣಕ್ಕೂ ಮೊಲಗಳಿಗೆ ಉಪ್ಪನ್ನು ತಿನ್ನಲು ಕೊಡಬಾರದು.

ಅವುಗಳ ಆರೋಗ್ಯದ ದೃಷ್ಟಿಯಿಂದ ಆಹಾರವನ್ನು ನೀಡುವಾಗ ನೀರಿನಲ್ಲಿ ತೊಳೆದು ಕೊಡಬೇಕು. ಗಂಡು ಮರಿಗಿಂತ ಹೆಣ್ಣು ಮರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಗಂಡು ಎರಡರಿಂದ ಮೂರು ಕೆ.ಜಿ ತೂಗಬಲ್ಲದು.

ಗಂಡು ಮೊಲವನ್ನು ಕೆ.ಜಿಗೆ 300 ರೂಪಾಯಿ ನೀಡಿ ಖರೀದಿಸುವವರಿದ್ದಾರೆ. ಮರಿಗಳಿಗೆ ಬಹುಬೇಡಿಕೆಯಿದ್ದು ಮರಿ ಮಾ

ರಾಟ ಲಾಭದಾಯಕ' ಎನ್ನುತ್ತಾರೆ ನಾಗರತ್ನ. ಪ್ರತಿದಿನವೂ ಗೂಡನ್ನು ಸ್ವಚ್ಛಗೊಳಿಸಬೇಕು. ಮಳೆಗಾಲದಲ್ಲಿ ಮೊಲಗಳಿಗೆ ಶೀತ ಆಗದಂತೆ ಎಚ್ಚರವಹಿಸಬೇಕು. ಆಗಾಗ ಹತ್ತಿರದಲ್ಲಿರುವ ಪಶು ವೈದ್ಯರಿಂದ ಸಲಹೆ ಸೂಚನೆ, ಮುಂಜಾಗ್ರತಾ ಕ್ರಮಗಳನ್ನು ತಿಳಿದುಕೊಳ್ಳಬೇಕು.

ಆಹಾರವನ್ನು ಪ್ರತಿದಿನವೂ ಕ್ರಮಬದ್ಧವಾಗಿ ನೀಡಬೇಕು. ಸಮಯಕ್ಕೆ ಸರಿಯಾಗಿ ಆಹಾರ, ನೀರನ್ನು ನೀಡುವುದರಿಂದ ಮೊಲಗಳ ಆರೋಗ್ಯದಲ್ಲಿ ಸ್ಥಿರತೆಯನ್ನು ಕಾಪಾಡುವುದು ಸುಲಭ. ನಾಗರತ್ನರವರ ಬಳಿ `ನ್ಯೂಜಿಲ್ಯಾಂಡ್ ವೈಟ್' ಮತ್ತು `ಕ್ಯಾಲಿಫೋರ್ನಿಯಾ' ತಳಿಗಳಿದ್ದು, ಮೊಲ ಸಾಕಣೆಗೆ ಎಕರೆಗಟ್ಟಲೆ ಜಮೀನು, ಹೆಚ್ಚು ಬಂಡವಾಳದ ಅಗತ್ಯವಿಲ್ಲ.

`ಒಂದು ಮೊಲಕ್ಕೆ ದಿನಕ್ಕೆ 50 ಪೈಸೆ ಖರ್ಚು ತಗಲುತ್ತದೆ. ಔಷಧಗಳು ಸುಲಭದಲ್ಲಿ ಲಭ್ಯ. ವರ್ಷದಲ್ಲಿ ಆರು ಬಾರಿ ಮರಿ ಹಾಕುತ್ತದೆ. ಒಂದು ಬಾರಿಗೆ ಐದರಿಂದ ಹದಿನೈದು ಮರಿಗಳನ್ನು ಹಾಕುತ್ತದೆ. ಮನೆಗೆ ಬಂದು ಮರಿಗಳನ್ನು ಖರೀದಿಸುವವರ ಸಂಖ್ಯೆ ದಿನ

ದಿಂದ ದಿನಕ್ಕೆ ಹೆಚ್ಚುತ್ತಿದೆ.

ಆರಂಭದಲ್ಲಿ ನೂರು ಮೊಲ (ಒಂದು ಯೂನಿಟ್) ಸಾಕಲು ಪಂಜರ ಇವೆಲ್ಲಾ ಸೇರಿ ಹದಿಮೂರು ಸಾವಿರ ರೂಪಾಯಿ ಖರ್ಚು ಆಗುತ್ತದೆ ಅಷ್ಟೇ. ಪ್ರತಿದಿನ ಎರಡರಿಂದ ಮೂರು ತಾಸುಗಳ ಕಾಲವನ್ನು ಸಾಕಣೆಗೆ ಮೀಸಲಿಟ್ಟರೆ ಸಾಕು ಎನ್ನುವ ಮಾಹಿತಿ ನೀಡುತ್ತಾರೆ ಅವರು. ಸಂಪರ್ಕಕ್ಕೆ 9632960731 (ಸಂಜೆ 6-7ಗಂಟೆ)
-ಚಂದ್ರಹಾಸ ಚಾರ್ಮಾಡಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT