ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭದ ಹೂ ಝರ್ಬೆರಾ

Last Updated 1 ಜೂನ್ 2011, 19:30 IST
ಅಕ್ಷರ ಗಾತ್ರ

ಹೂವಿನ ಬೇಸಾಯ ಈಗ ಲಾಭದಾಯಕ. ಸ್ವಲ್ಪ ಭೂಮಿ, ನೀರಿನ ಸೌಲಭ್ಯ ಇರುವ ರೈತರಿಗೆ ಹೂವಿನ ಬೇಸಾಯ ಹೆಚ್ಚು ಲಾಭದಾಯಕ. ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ ಹೂ ಬೆಳೆದು ಲಾಭಗಳಿಸಲು ಸಾಧ್ಯವಿದೆ.

ಕೆಲ ದೊಡ್ಡ ರೈತರು ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಈಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ವಿದೇಶಿ ಹೂಗಳನ್ನು ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಹತ್ತಿರ ಇರುವವರು ಹೂ ಬೆಳೆದು ಲಾಭಗಳಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ರೈತರು ಹೂವಿನ ಬೇಸಾಯಕ್ಕೆ ಮುಂದಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಸಮೀಪದ ಅಶೋಕನಗರದ ರೈತ ಮಲ್ಲಿಕಾರ್ಜುನ `ಝರ್ಬೆರಾ~ ಹೂ ಬೆಳೆದು ಸುತ್ತಲಿನ ರೈತರ ಗಮನ ಸೆಳೆದಿದ್ದಾರೆ.

ಮಲ್ಲಿಕಾರ್ಜುನ ಝರ್ಬೆರಾ ಹೂ ಬೆಳೆಯಲು ಓಪನ್ ವೆಂಟಿಲೇಟೆಡ್ ಪಾಲಿ ಹೌಸ್ ನಿರ್ಮಿಸಿದ್ದಾರೆ. 2004ರಲ್ಲಿ ಅದಕ್ಕೆ ಅವರು 2,60 ಲಕ್ಷ ರೂ ಖರ್ಚು ಮಾಡಿದ್ದಾರೆ.  ವಿದೇಶಿ ಮೂಲದ ಹೂಗಳನ್ನು ಎಲ್ಲೆಡೆ ಬೆಳೆಯಲು ಸಾಧ್ಯವಿಲ್ಲ. ಬೆಳೆಗೆ ಅಗತ್ಯವಿರುವ ಉಷ್ಣಾಂಶ ಕಾಪಾಡಿಕೊಳ್ಳಲು ಪಾಲಿ ಹೌಸ್‌ನ ಅಗತ್ಯವಿದೆ.

ಮಲ್ಲಿಕಾರ್ಜುನ ಅವರು ನೆದರ್ ಲ್ಯಾಂಡ್‌ನ ಸಹಯೋಗದ ಪುಣೆಯ ತೋಟಗಾರಿಕಾ ಪರಿಣತಿ ಪ್ರಶಿಕ್ಷಣಾ ಕೇಂದ್ರದಿಂದ ಝರ್ಬೆರಾ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಗಿಡಗಳಿಗೆ ಒಂದು ವರ್ಷ ಆಗುವವರೆಗೆ ಕೇಂದ್ರ ತಜ್ಞರು ತಿಂಗಳಿಗೊಮ್ಮೆ ಬಂದು ಸಲಹೆ ನೀಡಿದ್ದಾರೆ.

ಝರ್ಬೆರಾ ಬೆಳೆಯುವ ವಿಧಾನಗಳ ಬಗ್ಗೆ  ತರಬೇತಿ ಪಡೆದಿರುವ ಮಲ್ಲಿಕಾರ್ಜುನ ಅವರು 1/1 ಅಡಿ ಅಂತರದಲ್ಲಿ  ಗಿಡಗಳನ್ನು ನಾಟಿ ಮಾಡಿದ್ದಾರೆ. ಜೂನ್‌ನಿಂದ ಡಿಸೆಂಬರ್‌ವರೆಗೆ ನಾಟಿ ಮಾಡಲು ಸಕಾಲ.

ನಾಟಿ ನಂತರ 2 ತಿಂಗಳಲ್ಲಿ ಗಿಡಗಳಲ್ಲಿ ಮೊಗ್ಗು ಕಾಣಿಸಿಕೊಳ್ಳುತ್ತವೆ. ಮೂರನೇ ತಿಂಗಳಿಗೆ ಹೂ ಬಿಡುತ್ತವೆ. 5 ಗುಂಟೆ ಪ್ರದೇಶದಲ್ಲಿ ದಿನಕ್ಕೆ 350 ಹೂ ಬೆಳೆಯಬಹುದು.ಈ ಹೂಗಳನ್ನು ವೇದಿಕೆಗಳ ಅಲಂಕಾರಕ್ಕೆ ಹೆಚ್ಚಾಗಿ ಬಳಸುತ್ತಾರೆ.ಹೋಟೆಲ್ ಹಾಗೂ ಮನೆಗಳಲ್ಲಿ ಒಳಾಂಗಣ ಅಲಂಕಾರಕ್ಕೆ ಬಳಸುತ್ತಾರೆ. ಒಂದು ಹೂವಿಗೆ 5 ರೂ ಬೆಲೆ ಇದೆ.

ಯಾವುದೇ ಹೂ ಬೆಳೆಯುವುದು ಸುಲಭ. ಬೆಳೆದ ಹೂವನ್ನು ಕೊಯ್ಲು ಮಾಡಿ ಸಕಾಲದಲ್ಲಿ ಮಾರುಕಟ್ಟೆಗೆ ಕಳುಹಿಸುವುದು ಮುಖ್ಯ. ಝರ್ಬೆರಾ  ಹೂಗಳನ್ನು ಪ್ಯಾಕಿಂಗ್ ಮಾಡುವುದು ಬಹಳ ಮುಖ್ಯ. ಸ್ಥಳೀಯ ಜನರಿಗೆ ಪ್ಯಾಕಿಂಗ್‌ನಲ್ಲಿ ತರಬೇತಿ ನೀಡುವುದು ಮುಖ್ಯ.
 
ಪ್ಯಾಕಿಂಗ್‌ಗೆ ಬಳಸುವ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅವನ್ನು ಬಳಸಿಕೊಳ್ಳಬಹುದು. ಝರ್ಬೆರಾ ಹೂಗಳಿಗೆ ಬೆಂಗಳೂರು, ಮೈಸೂರು, ಚೆನ್ನೈ, ಗೋವಾ ಮುಂತಾದ ಕಡೆಗಳಲ್ಲಿ ಭಾರೀ ಬೇಡಿಕೆ ಇದೆ.
 
ಈಗ ಹೂಗಳನ್ನು ಖರೀದಿಸುವ ಮಧ್ಯವರ್ತಿಗಳು ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇದ್ದಾರೆ. ಅವರ ಮೂಲಕ ಮಾರಾಟ ಮಾಡಬಹುದು. ಹೂ ವ್ಯಾಪಾರಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳ ಬಹುದು. ಝರ್ಬೆರಾ ಹೂಗಳಿಗೆ ವರ್ಷದ ಉದ್ದಕ್ಕೂ ಮಾರುಕಟ್ಟೆ ಇದೆ. ಹೂಗಳ ಗುಣಮಟ್ಟ ಚೆನ್ನಾಗಿದ್ದರೆ  ವ್ಯಾಪಾರಿಗಳೇ ರೈತರನ್ನು ಹುಡುಕಿಕೊಂಡು ಬರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ- 9379060033.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT