ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಅಪಘಾತ: ಇಬ್ಬರ ಸಾವು

Last Updated 4 ಜೂನ್ 2011, 6:35 IST
ಅಕ್ಷರ ಗಾತ್ರ

ಇಳಕಲ್: ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಕಿ ಡಿಕ್ಕಿಯಲ್ಲಿ ಇಬ್ಬರು ಮತೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 13ರ ಮೇಲೆ ತೊಂಡಿಹಾಳ ಕ್ರಾಸ್ ಹತ್ತಿರ ಶುಕ್ರವಾರ ನಡೆದಿದೆ.

ಚಾಲಕ ಕುಷ್ಟಗಿ ತಾಲ್ಲೂಕಿನ ಕೆಸೂರು ಗ್ರಾಮದ  ಕೃಷ್ಣಪ್ಪ ಶರಣಪ್ಪ ಬಸಾಪುರ (35) ಹಾಗೂ ಕ್ಲೀನರ್ ಬೂದೂರಿನ ಶಶಿಧರ ಮಾನಪ್ಪ ಕಂಬಾರ (24)ಮೃತಪಟ್ಟಿದ್ದಾರೆ.

ರಾಜಸ್ಥಾನದ ಇನ್ನೊಂದು ಲಾರಿಯ ಚಾಲಕ ಹಾಗೂ ಕ್ಲೀನರ್  ಗಂಭೀರವಾಗಿ ಗಾಯಗೊಂಡ್ದ್ದಿದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇಳಕಲ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಪರಸ್ಪರ ಡಿಕ್ಕಿ
ಬಾಗಲಕೋಟೆ: ನಗರದ ಕುಮಾರೇಶ್ವರ ಆಸ್ಪತ್ರೆ ರಸ್ತೆಯಲ್ಲಿ ಟಂಟಂ ಹಾಗೂ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಆರು ಜನರು ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.

ಬಾಗಲಕೋಟೆಯಿಂದ ನವನಗರದ ಕಡೆಗೆ ಹೊರಟಿದ್ದ ಟಂಟಂ ಎದುರಿನಿಂದ ಬಂದ ಬೈಕ್ ಹಾಗೂ ಪಕ್ಕದಲ್ಲಿ ಹೊರಟಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆಗೆ ಉರುಳಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಟಂಟಂನಲ್ಲಿದ್ದ ಪ್ರಯಾಣಿಕರು ಹಾಗೂ ಬೈಕ್ ಸವಾರರು ಸೇರಿದಂತೆ ಒಟ್ಟು ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ರಸ್ತೆಗೆ ಟಂಟಂ ಉರುಳಿದಾಗ ಅದರಡಿಯಲ್ಲಿ ಸಿಲುಕಿದ್ದ ಜನರ ರಕ್ಷಣೆಗಾಗಿ ಟಂಟಂ ಅನ್ನು ಎತ್ತಿದಾಗ ಅದು ಇನ್ನೊಂದು ಬದಿಗಿದ್ದ ಬೈಕ್ ಮೇಲೆ ಉರುಳಿಬಿದ್ದಿತು.

ಗಾಯಾಳುಗಳು ಸಮೀಪದ ಕುಮಾರೇಶ್ವರ ಆಸ್ಪತ್ರೆ ಹಾಗೂ ದಡ್ಡೇನವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಮಿನಿಲಾರಿ-ಬಸ್‌ಡಿಕ್ಕಿ: ಚಾಲಕ ಗಂಭೀರ ಗಾಯ
ಜಮಖಂಡಿ:  ಮಿನಿಲಾರಿ ಮತ್ತು ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮಧ್ಯೆ ಸಂಭವಿಸಿದ   ರಸ್ತೆ ಅಪಘಾತದಲ್ಲಿ ಮಿನಿಲಾರಿ ಚಾಲಕನ ಎರಡೂ ಕಾಲುಗಳು ಮುರಿದ ಘಟನೆ  ತಾಲ್ಲೂಕಿನ ಚಿಕ್ಕಪಡಸಲಗಿಯ  ಕೃಷ್ಣಾ ನದಿ ಸೇತುವೆ ಸಮೀಪ ನಡೆದಿದೆ. 

 ವಿಜಾಪುರ ಕಡೆಯಿಂದ ಜಮಖಂಡಿಗೆ ಬರುತ್ತಿದ್ದ ಮಿನಿಲಾರಿಗೆ ಜಮಖಂಡಿಯಿಂದ ಆಳಂದ ಕಡೆಗೆ ಹೋಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ಜಖಂಗೊಂಡಿವೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾವಳಗಿ ಗ್ರಾಮದ ಬಾಬಾಸಾಹೇಬ ಟಕ್ಕೋಡ ನೀಡಿದ ವರದಿಯನ್ವಯ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಬಿ.ಬಾಗೇವಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವಸ್ಥಾನದಿಂದ ಬೆಳ್ಳಿ ಕಳ್ಳತನ
ಬನಹಟ್ಟಿ: ಶಿವಲಿಂಗೇಶ್ವರ ಮೂರ್ತಿ  ಹಾಗೂ ಪ್ರಭಾವಳಿಯನ್ನು  ಕದ್ದೊಯ್ದು  ಸ್ಮಶಾನದಲ್ಲಿ  ಪ್ರಭಾವಳಿಯನ್ನು ಒಡೆದು ಅದರಲ್ಲಿಯ ಬೆಳ್ಳಿಯನ್ನು  ಒಯ್ದ ಘಟನೆ ಇಲ್ಲಿಗೆ ಸಮೀಪದ ಕುಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ಶಿವಲಿಂಗೇಶ್ವರ ದೇವಸ್ಥಾನದ ಬಾಗಿಲು ಮುರಿದು ಬುಧವಾರ ರಾತ್ರಿ  ಕಳ್ಳತನ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಅಭಿಷೇಕ ಗೋಯಲ್, ಸಿ.ಪಿ.ಐ ಗೋಪಾಲ ಜೋಗಿನ, ಪಿ.ಎಸ್.ಐ. ಉದ್ದಪ್ಪ ಕಟ್ಟಿಕಾರ ಭೇಟಿ ನೀಡಿ ಪರಿಶಿಲಿಸಿದರು. ಬೆರಳಚ್ಚು ತಜ್ಞರ ತಂಡ ಬೆರಳಚ್ಚು ಪಡೆದುಕೊಂಡಿದೆ. ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಾತಿನಚಕಮಕಿ
ಅಮೀನಗಡ (ಗುಳೇದಗುಡ್ಡ): ವಾಹನಸಂಚಾರಕ್ಕೆ ತಡೆ ಉಂಟಾದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಬಳಿ  ನಿಲ್ಲಿಸಿದ ಆಟೋಗಳನ್ನು ಪೊಲೀಸರು ತೆರವುಗೊಳಿಸಲು ಯತ್ನಿಸಿದಾಗ ಆಟೋಚಾಲಕರು ಹಾಗೂ ಪೊಲೀಸರ ಮಧ್ಯೆ ಗುರುವಾರ ಮಾತಿನಚಕಮಕಿ ನಡೆಯಿತು.

ಆಟೋರಿಕ್ಷಾ ನಿಲುಗಡೆ ಮಾಡಲು ಒಂದು ಸ್ಥಳ ಗೊತ್ತುಮಾಡಿ, ನಂತರ ಆಟೋಗಳನ್ನು ತೆರವುಗೊಳಿಸಿ ಎಂದು ಆಟೋಚಾಲಕರು ಒತ್ತಾಯಿಸಿದರು.

ಸಿ.ಪಿ.ಐ. ಸಂಗಣ್ಣ ತುಂಬಗಿ, ಆಟೋನಿಲುಗಡೆಗೆ ಸ್ಥಳ ನಿಗದಿಪಡಿಸುವ ಕೆಲಸ ನಮ್ಮದಲ್ಲ.  ವಾಹನಸಂಚಾರಕ್ಕೆ ತಡೆ ಉಂಟಾಗದಂತೆ ಆಟೋಗಳನ್ನು ನಿಲುಗಡೆ ಮಾಡಬೇಕು ಅಷ್ಟೇ ಎಂದು ತಾಕೀತು ಮಾಡಿದರು. ಇದರಿಂದ ಸಮಾಧಾನಗೊಳ್ಳದ ಅಟೋರಿಕ್ಷಾ ಚಾಲಕರು ಸಾವಿರಾರು ರೂಪಾಯಿ ಸಾಲ ಮಾಡಿಕೊಂಡು ಅಟೋ ಖರೀದಿಮಾಡಿದ್ದೇವೆ. ಅಲ್ಲಿ-ಇಲ್ಲಿ ನಿಲ್ಲಿಸಬೇಡಿ ಎಂದು ಕಿರಿಕಿರಿ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ನಂತರ ಪೊಲೀಸರು ಎಲ್ಲ ಆಟೋಚಾಲಕರನ್ನು ಕರೆಯಿಸಿ ಅವರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗೆ ಪರಿಹಾರಕಂಡುಕೊಳ್ಳುವ ಭರವಸೆ ನೀಡಿದರು. ನಂತರ ವಾತಾವರಣ ತಿಳಿಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT