ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರ ತಾಲ್ಲೂಕು ಪಂಚಾಯಿತಿ-ಬಸವರಾಜ ಅಧ್ಯಕ್ಷ, ಸಂಗಮ್ಮಉಪಾಧ್ಯಕ್ಷ

Last Updated 11 ಫೆಬ್ರುವರಿ 2011, 7:20 IST
ಅಕ್ಷರ ಗಾತ್ರ

ಲಿಂಗಸುಗೂರ: ಸ್ಥಳೀಯ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಕೊನೆಯ ಗಳಿಗೆಯಲ್ಲಿ ಎರಡು ಪಕ್ಷದವರು ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರಿಂದ ಕಾಂಗ್ರೆಸ್ ಪಕ್ಷದ ಬಸವರಾಜ ಲಕ್ಷ್ಮಪ್ಪ ತಳವಾರ ಅಧ್ಯಕ್ಷರಾಗಿ, ಸಂಗಮ್ಮ ಸಿದ್ಧನಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವುದನ್ನು ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ ಘೋಷಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಬಸವರಾಜ ಲಕ್ಷ್ಮಣ ತಳವಾರ, ಬಿಜೆಪಿ ಪಕ್ಷದಿಂದ ತಿಮ್ಮಣ್ಣ ಬಾಲಪ್ಪ ಹಡಗಲಿ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ದಿಂದ ಸಂಗಮ್ಮ ಸಿದ್ಧನಗೌಡ, ಜೆಡಿಎಸ್ ಪಕ್ಷದಿಂದ ಬಸಮ್ಮ ಪರಮೇಶ್ವರ ಹಟ್ಟಿ ನಾಮಪತ್ರ ಸಲ್ಲಿಸುವ ಮೂಲಕ ವಾತಾವರಣ ತುರುಸುಗೊಂಡಂತೆ ಕಂಡು ಬಂದಿತು. ಆಡಳಿತ ವ್ಯವಸ್ಥೆ ಬಂದೋಬಸ್ತ್‌ಗೆ ಮುಂಜಾಗ್ರತೆ ವಹಿಸಿದ್ದು ಕಂಡುಬಂದಿತು. ಕಾಂಗ್ರೆಸ್ ಕೈಚಳಕದಿಂದ ಬಿಜೆಪಿ ಸದಸ್ಯ ಗೈರು ಹಾಜರಾಗಿರುವುದು ಅವಿರೋಧ ಆಯ್ಕೆಗೆ ದಾರಿ ಸುಗಮವಾಯಿತು.

ಕಾಂಗ್ರೆಸ್ ಪಕ್ಷದ 13 ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಒಂದು ಹಂತದಲ್ಲಿ ಈ ಮುಂಚಿನ ನಿಯಮದಂತೆ ಕನಿಷ್ಟ 14 ಸದಸ್ಯರು ಇರಬೇಕೆಂಬ ನಿಯಮ ಚುನಾವಣೆ ಮುಂದೂಡಬಹುದು ಎಂಬ ಮತ್ತೊಂದು ಕುತೂಹಲ ಕಾಂಗ್ರೆಸ್‌ನವರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಸಭೆಯಲ್ಲಿ ಸಹಾಯಕ ಆಯುಕ್ತರು ಈ ಬಾರಿ ಒಟ್ಟು ಸದಸ್ಯರ ಅರ್ಧದಷ್ಟು ಸದಸ್ಯರು ಹಾಜರಿದ್ದರೆ ಸಾಕು ಎಂಬ ನಿಯಮ ಹೇಳುವ ಮೂಲಕ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಸಮಗ್ರ ಅಭಿವೃದ್ಧಿ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರು, ಶೌಚಾಲಯ, ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸರ್ಕಾರದ ಅನುದಾನದ ಸದ್ಭಳಕೆ ಮಾಡಿಕೊಂಡು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಇತರೆ ಸದಸ್ಯರ, ಪಕ್ಷದ ಹೈಕಮಾಂಡ ಸಲಹೆ ಪಡೆದುಕೊಳ್ಳಲಾಗುವುದು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕಾರ ನೀಡುವಂತೆ ನೂತನ ಅದ್ಯಕ್ಷ ಬಸವರಾಜ ತಳವಾರ ಮನವಿ ಮಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಎಂ.ರಾಚಪ್ಪ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್ ಪಾಟೀಲ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT