ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ ಪ್ರಧಾನಿ ಸೆರೆ

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಟ್ಯುನಿಸ್ (ಎಎಫ್‌ಪಿ):  ಟ್ಯುನಿಸಿಯಾ ಸರ್ಕಾರವು ಕಳೆದ ತಿಂಗಳು ಪತನಗೊಂಡ ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಆಡಳಿತದಲ್ಲಿ ಪ್ರಧಾನಿಯಾಗಿದ್ದ ಬಾಗ್ದಾದಿ ಅಲ್-ಮಹಮದಿ ಅವರನ್ನು ಬಂಧಿಸಿ, ಆರು ತಿಂಗಳು ಜೈಲಿಗೆ ತಳ್ಳಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ದೇಶದೊಳಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಾಗ್ದಾದಿ ಅವರನ್ನು ಬುಧವಾರವಷ್ಟೇ ಟ್ಯುನಿಸಿಯಾ ಬಂಧಿಸಿತ್ತು. ಇವರನ್ನು ಇಲ್ಲಿಗೆ ಸಮೀಪದ ತಾಜಿಯುರ್ ನಗರದ ನ್ಯಾಯಾಧೀಶರ ಮುಂದೆ ಗುರುವಾರ ಹಾಜರುಪಡಿಸಲಾಗಿ, ತಕ್ಷಣದಿಂದ ಸೆರೆವಾಸ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಸರ್ಕೋಜಿಗೆ  ಮಹಿಳೆಯ ಸವಾಲು
ಲಂಡನ್ (ಐಎಎನ್‌ಎಸ್):
ಫಾನ್ಸ್ ಸರ್ಕಾರ ವಿಧಿಸಿದ ನಿಷೇಧವನ್ನು ಉಲ್ಲಂಘಿಸಿ ಬುರ್ಖಾ ಧರಿಸಿದ ಕಾರಣಕ್ಕಾಗಿ ದಂಡ ಶಿಕ್ಷೆಗೆ ಗುರಿಯಾಗಿರುವ 32 ವರ್ಷದ ಕೆನ್ಜಾ ಡ್ರೈಡರ್ ಎಂಬಾಕೆ, ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ವಿರುದ್ಧ ಸ್ಪರ್ಧಿಸುವುದಾಗಿ ಗುರುವಾರ ಘೋಷಿಸಿದ್ದಾಳೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT