ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಲೂಟಿ ಮಾಡಿದ ಪಕ್ಷಕ್ಕೆ ಮತ ಬೇಡ'

Last Updated 9 ಏಪ್ರಿಲ್ 2013, 6:11 IST
ಅಕ್ಷರ ಗಾತ್ರ

ಶೃಂಗೇರಿ: ಬಿಜೆಪಿಯ ದುರಾಡಳಿತದಿಂದ ಜನತೆ ಬದಲಾವಣೆ ಬಯಸಿದ್ದು, ಪ್ರತಿಯೊಬ್ಬ ಕಾರ್ಯಕರ್ತರಿಗೂ ಈ ಬಾರಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವುದೇ ಗುರಿಯಾಗಿರಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ  ಸೌಭಾಗ್ಯ ಗೋಪಾಲನ್ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾದ ಕಾರ್ಯಕರ್ತರನ್ನು ಅಭಿನಂದಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಮಾಡಿದಂತಹ ಹಲವಾರು ಅಕ್ರಮಗಳ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಬೇಸರ ವಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ಹೆಚ್ಚಿನ ಬೆಂಬಲ ತೋರಲಿದ್ದಾರೆ ಎಂದರು.

ಪಕ್ಷದ ಕಸಬಾ ಹೋಬಳಿ ಅಧ್ಯಕ್ಷ ಕೆ.ಎಂ. ರಮೇಶ್ ಭಟ್ ಮಾತನಾಡಿ, ಜನ ಸಾಮಾನ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಟಿ.ಡಿ. ರಾಜೇಗೌಡ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ. ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಕಾಂಗ್ರೆಸ್ ಗೆಲುವಿಗೆ ಎಲ್ಲರ ಪ್ರಯತ್ನ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಈಗಿನಿಂದಲೇ ಶ್ರಮಿಸಬೇಕು ಎಂದರು.

ಪಕ್ಷದ ಮುಖಂಡರಾದ ಕುರಾದ ಮನೆ ವೆಂಕಟೇಶ್, ಉದಯ್‌ಕುಮಾರ್, ಕೆ.ಸಿ. ವೆಂಕಟೇಶ್, ನಟರಾಜ, ಮಹಾಬಲ, ಹರಿಪ್ರಸಾದ್, ರಾಜೇಶ್ ಎಂ. ಶೆಟ್ಟಿ, ಗೀತಾ ಶ್ರಿನಿವಾಸ ನಾಯ್ಕ ಮತ್ತಿತರರು ಇದ್ದರು. 

ಇದೇ ಸಂದರ್ಭದಲ್ಲಿ ತಾಲೂಕಿನ ಕೂತಗೋಡು ಗ್ರಾ.ಪಂ.ಯ ಕೊಚ್ಚವಳ್ಳಿ ಚೆನ್ನಕೇಶವ, ಮಹೇಶ್, ಶ್ರಿನಿವಾಸ ಅತ್ತೊಳ್ಳಿ, ಅಶೋಕ ಶಿಡ್ಲೆ, ಕೆ.ಸಿ. ನಾಗೇಶ್, ಕೆ.ಎಂ. ಸಿದ್ಧಪ್ಪ, ಕೊಡ್ತಲು ಜಗದೀಶ, ನಾಗೇಶ್ ಆಚಾರ್, ಕಲ್ಲಳ್ಳಿ ರಾಜಣ್ಣ, ಬೇಗಾರು ಗ್ರಾ.ಪಂ.ಯ ನವೀನ್ ಕಡಾವಡಿ, ಸಂದೀಪ ಶೆಟ್ಟಿ, ಪ್ರದೀಪ ಶೆಟ್ಟಿ, ಮಂಜುನಾಥ ಗಗ್ಗುಡಿಗೆ, ಕಾಶೀನಾಥ್,   ಮೋಹನ್, ನಾರಾಯಣ ನಾಯ್ಕ ಮತ್ತಿತರರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT