ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕರ ಬರವಣಿಗೆ ಕುರಿತು ಚರ್ಚೆ ಅಗತ್ಯ

ವಿವಿಧ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಡಾ. ರಹಮತ್ ತರೀಕೆರೆ
Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಲೇಖಕರ ಬರವಣಿಗೆಯ ಕುರಿತು ವ್ಯಾಪಕ ಚರ್ಚೆ ನಡೆಯುವ ಮೂಲಕ ಅವರ ಅಂತಃಶಕ್ತಿಯನ್ನು ಹೆಚ್ಚಿಸುವ ಕಾರ್ಯನಡೆಯಬೇಕು' ಎಂದು ಎಂದು ಲೇಖಕ ಡಾ.ರಹಮತ್ ತರೀಕೆರೆ ತಿಳಿಸಿದರು.

ನವಕರ್ನಾಟಕ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
`ಸಮಾಜದ ಸಮಗ್ರ ವಿಷಯಗಳ ಕುರಿತು ತುಲನಾತ್ಮಕವಾಗಿ ಚಿಂತಿಸುವ ಲೇಖಕರ ಬರವಣಿಗೆಯ ಕುರಿತು ಟೀಕೆ ಮಾಡಬೇಕು, ಜನಾಭಿಪ್ರಾಯದ ಮೂಲಕ ಲೇಖಕರ ಪ್ರಜ್ಞೆಯನ್ನು ಎಚ್ಚರಗೊಳಿಸುವ ತುರ್ತು ಇದೆ' ಎಂದು ಅಭಿಪ್ರಾಯಪಟ್ಟರು.

`ಸರ್ಕಾರದ ಆಶ್ರಯಕ್ಕೆ ಶರಣಾಗುತ್ತಿರುವ ಲೇಖಕರ ನಡುವೆಯೂ ಸಮಾಜ ಹಾಗೂ ಜನಮುಖಿ ಚಿಂತನೆಯಿಂದಲೇ ಅಕ್ಷರ ಕಟ್ಟುವ ಬಗ್ಗೆ ಪ್ರಯತ್ನ ನಡೆಸಬೇಕು' ಎಂದು ಸಲಹೆ ನೀಡಿದರು.

ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, `ಶಾಲಾ ಶಿಕ್ಷಕರ ಕನ್ನಡ ಭಾಷೆಯನ್ನು ಸ್ಪಷ್ಟಗೊಳಿಸುವ ಪ್ರಮುಖ ಉದ್ದೇಶವಿಟ್ಟುಕೊಂಡು `ಇಗೋ ಕನ್ನಡ' ಅಂಕಣವನ್ನು ಸುಮಾರು ಹದಿನೆಂಟು ವರ್ಷಗಳ ಕಾಲ ಬರೆದೆ' ಎಂದರು. ಕನ್ನಡ ಭಾಷೆಯನ್ನು ಉಳಿಸುವ ದಿಸೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು.

`ನವಕರ್ನಾಟಕ ಸಾಹಿತ್ಯ ಸಂಪದ'ದಡಿ ಡಾ. ಶಾಂತಾ ಇಮ್ರಾಪೂರ ಅವರ `ಸಂ.ಶಿ.ಭೂಸನೂರಮಠ', ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರ `ಜಿ.ಎಸ್. ಶಿವರುದ್ರಪ್ಪ', ಡಾ. ಪ್ರಧಾನ್ ಗುರುದತ್ತ ಅವರ `ಸುಜನಾ', ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ `ರಾಘವೇಂದ್ರ ಪಾಟೀಲ', ಡಾ. ಮಾಲತಿ ಪಟ್ಟಣಶೆಟ್ಟಿ ಅವರ `ಶ್ರೀನಿವಾಸ ವೈದ್ಯ', ಸ. ಉಷಾ ಅವರ `ವೈದೇಹಿ', ಡಾ. ರಂಗನಾಥ ಕಂಟನಕುಂಟೆ ಅವರ `ರಹಮತ್ ತರೀಕೆರೆ', ಡಾ. ಗೀತಾ ಶೆಣೈ ಅವರ `ಗೋಪಾಲಕೃಷ್ಣ ಪೈ' ಕೃತಿ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT