ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಾರ್ಯಕರ್ತರಿಗೆ ಪಡಿತರ ಚೀಟಿ ವಿತರಿಸಿ

Last Updated 15 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೈಂಗಿಕ ಕಾರ್ಯಕರ್ತರಿಗೆ ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ನೀಡುವಂತೆ ಸುಪ್ರೀಂಕೋರ್ಟ್ ಗುರುವಾರ ಎಲ್ಲಾ ಕೇಂದ್ರ ಮತ್ತು ರಾಜ್ಯಗಳಿಗೆ ಸೂಚನೆ ನೀಡಿದೆ.

ಲೈಂಗಿಕ ಕಾರ್ಯಕರ್ತರ ಪುನರ್‌ವಸತಿಗಾಗಿ ಸಲಹೆ ನೀಡುವಂತೆ ರಚಿಸಿದ್ದ ಸಮಿತಿಯ ಮೂರನೇ ವರದಿಯನ್ನು ಅಂಗೀಕರಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮತ್ತು ಜ್ಞಾನ್ ಸುಧಾ ಮಿಶ್ರಾ ಅವರನ್ನು ಒಳಗೊಂಡ ಪೀಠವು ಈ ನಿರ್ದೇಶನ ನೀಡಿದೆ.

ಹಿರಿಯ ವಕೀಲರಾದ ಪ್ರದೀಪ್ ಘೋಷ್ ಜಯಂತ್ ಭೂಷಣ್ ಮತ್ತು ಕೆಲವು ಎನ್‌ಜಿಒಗಳ ಪದಾಧಿಕಾರಿಗಳನ್ನು ಸಮಿತಿ ಒಳಗೊಂಡಿತ್ತು.

`ಸಮಿತಿ ನೀಡಿರುವ ಸಲಹೆ ಉತ್ತಮವಾಗಿದೆ. ಪಡಿತರ ಚೀಟಿ, ಮತದಾರರ ಗುರುತು ಚೀಟಿ ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆಯುವಾಗ ಲೈಂಗಿಕ ಕಾರ್ಯಕರ್ತರು ಅನೇಕ ಸಂಕಷ್ಟ ಎದುರಿಸಬೇಕಾಗುತ್ತದೆ. ಅವರೂ ಭಾರತದ ಪ್ರಜೆಗಳಾದ್ದರಿಂದ ಮತ್ತು ಇತರರಂತೆ ಮೂಲಭೂತ ಹಕ್ಕುಗಳನ್ನು ಹೊಂದಿರುವುದರಿಂದ ಅವರು ಇಂತಹ ಕಷ್ಟಗಳನ್ನು ಎದುರಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು~ ಎಂದು ಪೀಠ ತಿಳಿಸಿದೆ.

`ಸಮಿತಿ ತನ್ನ ಮೂರನೇ ಮಧ್ಯಂತರ ವರದಿಯಲ್ಲಿ ಮಾಡಿರುವ ಸಲಹೆಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಜಾರಿಗೊಳಿಸಬೇಕು~ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT