ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಬೇರಿಯಾ ಅಧ್ಯಕ್ಷೆ ಎಲೆನ್‌ಗೆ ನೊಬೆಲ್: ಮಹಿಳಾ ತಂಡಕ್ಕೆ ಸಂತಸ

Last Updated 9 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಶ್ವಸಂಸ್ಥೆ ಶಾಂತಿ ಪಾಲನಾ ತಂಡದ ಸದಸ್ಯರಾಗಿ ಲೈಬೀರಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ 125 ಮಹಿಳಾ ಪೊಲೀಸರಿಗೆ, ಅಲ್ಲಿನ ಅಧ್ಯಕ್ಷೆ ಎಲೆನ್ ಜಾನ್ಸನ್ ಸರ್‌ಲೀಫ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಿರುವುದು ಎಲ್ಲಿಲ್ಲದ ಸಂತೋಷ ತಂದಿದೆ.

ಕೇಂದ್ರ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಸೇರಿದ ಈ ಮಹಿಳೆಯರನ್ನು ವಿಶೇಷ ಪೊಲೀಸ್ ಅಧಿಕಾರಿಗಳಾಗಿ ವಿಶ್ವಸಂಸ್ಥೆಯ ಮೂಲಕ, ಎಲೆನ್ ಭದ್ರತೆಗಾಗಿ ನಿಯೋಜಿಸಲಾಗಿದೆ.

`ಎಲೆನ್ ಪ್ರಶಸ್ತಿ ಬಂದಿರುವುದು  ನಮಗೆ ಅಪಾರ ಸಂತೋಷವಾಯಿತು~ ಎಂದು ಹೇಳುತ್ತಾರೆ ಭಾರತೀಯ ಮಹಿಳಾ ಪೊಲೀಸ್ ಘಟಕದ ಮುಖ್ಯಸ್ಥೆ ಪೂನಂ ಗುಪ್ತ.

ದಿನದ  24 ಗಂಟೆ ಎಲೆನ್ ಅವರ ಕಚೇರಿಯಲ್ಲಿ ಕಾವಲು ಕಾಯುವ ಈ ಮಹಿಳೆಯರು ಎಕೆ-47, ಐಎನ್‌ಎಸ್‌ಎಎಸ್ ರೈಫಲ್‌ಗಳಂಥ ಶಸ್ತ್ರಾಸ್ತ್ರಗಳು ಹಾಗೂ ಲಘು ಮಶೀನ್ ಗನ್‌ಗಳನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ.

ವಿಶ್ವ ಸಂಸ್ಥೆಯ ಶಾಂತಿ ಪಾಲನಾ ತಂಡಕ್ಕೆ ಭಾರತ ನಿರಂತರವಾಗಿ ತನ್ನ ಪಡೆಗಳನ್ನು ಕಳುಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT