ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ನಾಳೆ ಅಧಿಸೂಚನೆ ಪ್ರಕಟ

4 ವಿಧಾನಸಭಾ ಕ್ಷೇತ್ರ: ಜಿಲ್ಲೆಯಲ್ಲಿ 6,55,278 ಮತದಾರರು
Last Updated 18 ಮಾರ್ಚ್ 2014, 10:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಉಡುಪಿ–ಚಿಕ್ಕಮಗ ಳೂರು ಲೋಕಸಭಾ ಚುನಾವಣೆ ಏಪ್ರಿಲ್ 17ರಂದು ನಡೆಯುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ 4 ವಿಧಾನ ಸಭಾ ಕ್ಷೇತ್ರಗಳ 938 ಮತಗಟ್ಟೆಗಳಲ್ಲಿ 6,55,278 ಮಂದಿ ಮತಚಲಾಯಿಸ ಲಿದ್ದಾರೆ ಎಂದು ಜಿಲ್ಲಾ ಚುನಾವಣಾ ಧಿಕಾರಿ ಬಿ.ಎಸ್‌.ಶೇಖರಪ್ಪ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 3,31,009 ಪುರುಷರು, 3,24,241 ಮಹಿಳೆಯರು ಮತದಾ ನದಲ್ಲಿ ಪಾಲ್ಗೊಳ್ಳಲಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರ­ದಲ್ಲಿ 74,939 ಪುರು ಷರು, 75,­256 ಮಹಿಳೆ­ಯರು ಸೇರಿ ದಂತೆ 1,50,199 ಮತ ದಾರರು 249 ಮತಗಟ್ಟೆಯಲ್ಲಿ ಮತ ಚಲಾಯಿಸಲಿ ದ್ದಾರೆ ಎಂದರು.

ಮೂಡಿಗೆರೆಯಲ್ಲಿ  75760 ಪುರು ಷರು, 76212 ಮಹಿಳೆಯರು ಸೇರಿದಂತೆ 1,51, 977ಮತದಾರರು 224 ಮತಗಳಲ್ಲಿ ಮತ ಚಲಾಯಿ ಸುವರು. ಚಿಕ್ಕಮಗಳೂರು ವಿಧಾನ­ಸಭಾ ಕ್ಷೇತ್ರದಲ್ಲಿ  96, 614 ಪುರು-­ಷರು, 94,744 ಮಹಿಳೆ ಯರು ಸೇರಿದಂತೆ ಒಟ್ಟು 1,91,369 ಮತ ದಾರರು 238 ಮತಗಟ್ಟೆಯಲ್ಲಿ ಹಾಗೂ ತರೀಕೆರೆ ವಿಧಾನಸಭಾ ಕ್ಷೇತ್ರ ದಲ್ಲಿ 83,639 ಪುರುಷರು, 78, 029ಮಹಿಳೆಯರು ಸೇರಿ  1,61,731 ಮತದಾರರು 221 ಮತಗಟ್ಟೆಯಲ್ಲಿ ಮತ ಚಲಾಯಿ ಸುವರು ಎಂದು ತಿಳಿಸಿದರು.

ಇದೇ 19ರಂದು ಚುನಾವಣೆ ಅಧಿ ಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಸಲು ಇದೇ 26 ಕೊನೆ ದಿನ. ಮರುದಿನ ನಾಮಪತ್ರ ಪರಿಶೀಲನೆ ನಡೆಯುತ್ತಿದ್ದು, ಇದೇ 29ರಂದು ನಾಮಪತ್ರ ಹಿಂಪಡೆಯಬಹುದು. ಏಪ್ರಿಲ್ 17 ಮತದಾನ ನಡೆಯು ತ್ತಿದ್ದು, ಮೇ 16ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.

ನಕ್ಸಲ್ ಬಾಧಿತ ಪ್ರದೇಶದಲ್ಲಿ ಕಳೆದ ವರ್ಷ ನಕ್ಸಲೀಯರು ಹೆಚ್ಚು ಕಾಣಿಸಿ ಕೊಂಡಿದ್ದರೂ ಮತದಾನ ಪ್ರಮಾಣ ಹೆಚ್ಚಳವಾಗಿತ್ತು. ನಾಗರಿಕರ ಸಮಸ್ಯೆಗೆ ಒತ್ತು ನೀಡಿದಾಗ ಅಂತಹ ಚಟುವಟಿಕೆಗೆ ಅವಕಾಶವಾಗದು. ಈಗಾಗಲೇ ನಕ್ಸಲ್ ಪ್ರಭಾವಿತ ಪ್ರದೇಶಗಳಲ್ಲಿ ಮೊದಲ ನೆಯ ಕುಂದುಕೊರತೆ ಸಭೆ ನಡೆಸ ಲಾಗಿತ್ತು. ಎರಡನೆಯ ಸಭೆ ನಡೆಸಲು ನಿರ್ಧರಿಸುವಷ್ಟರಲ್ಲಿ ಚುನಾವಣೆ ಘೋಷ­ಣೆ­ಯಾಯಿತು ಎಂದರು.

ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆ ಕುರಿತು ಕೇಳಿದಾಗ, ಹಿಂದಿನ ಚುನಾವಣೆಯಲ್ಲಿ ನಡೆದ ಘಟನೆಗಳನ್ನು ಅವಲೋಕಿಸಿ, ಏನೆಲ್ಲ ಮಾನದಂಡ ಅನುಸರಿಸಬೇಕು ಎಂಬುದನ್ನು ನಿರ್ಧರಿಸಿ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆ ಗುರುತಿಸಲಾಗುವುದು ಎಂದು ಹೇಳಿ­ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT