ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಪಾಟೀಲರ ಮೇಲೆ ಬಂದಿರುವ ಆರೋಪಗಳಿಗೆ ನಾಳೆ ಸ್ಪಷ್ಟನೆ.

Last Updated 18 ಸೆಪ್ಟೆಂಬರ್ 2011, 13:00 IST
ಅಕ್ಷರ ಗಾತ್ರ

ಬೆಂಗಳೂರು (ಪಿ.ಟಿ.ಐ);ನಿವೇಶನ ಹಂಚಿಕೆ ವಿಚಾರದಲ್ಲಿ ಲೋಕಾಯುಕ್ತ ಪಾಟೀಲರು ಮತ್ತು ಅವರ ಪತ್ನಿ ಸಿಲುಕಿಗೊಂಡಿದ್ದು ಅದಕ್ಕೆ ಅವರು ನಾಳೆ ಸ್ಪಷ್ಟನೆಯನ್ನು ನೀಡಲಿದ್ದಾರೆ.ಇವರು ಮಾಜಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಆಗಿದ್ದು ಆರು ವಾರಗಳ ಹಿಂದೆ ಲೋಕಾಯುಕ್ತರಾಗಿ ಅಧಿಕಾರವಹಿಸಿಕೊಂಡಿದ್ದರು.

ಈ ವಿಚಾರವಾಗಿ ಅವರು ಮಾನಸಿಕವಾಗಿ ನೋವನ್ನು ಅನುಭವಿಸುತ್ತಿದ್ದು ರಾಜೀನಾಮೆ ನೀಡಲು ಸಹ ಮುಂದಾಗಿದ್ದಾರೆ.ನಾಳೆ ಪತ್ರಿಕಾಗೋಷ್ಠಿಯನ್ನು ಕರೆದಿದ್ದು  ಅದರಲ್ಲಿ ಸಂಪೂಣ೵ವಾದ ವಿವರವನ್ನು ಅವರು ನೀಡಲಿದ್ದಾರೆ.

ಅನ್ನಪೂರ್ಣ ಅವರು ಬೆಂಗಳೂರಿನ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರಿ ಸಂಘದ ಸದಸ್ಯರಲ್ಲಿ ಒಬ್ಬರು ಎನ್ನಲಾಗಿದ್ದು ಅವರು ನಾಗವಾರದ ಬಳಿ 4,012ಚದರ ಅಡಿ ವಿಸ್ತೀರ್ಣದ ನಿವೇಶವೊಂದನ್ನು ಸಂಘದಿಂದ 2006ರ ಅಕ್ಟೋಬರ್11ರಂದು ಖರೀದಿಸಿದ್ದಾರೆ.

ಇದಕ್ಕೂ ಮುನ್ನ ಅಂದರೆ 1994ರಲ್ಲಿ ಶಿವರಾಜ್ ಪಾಟೀಲ್ ಅವರು ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದಿಂದ ಅಲ್ಲಾಳಸಂದ್ರದಲ್ಲಿ9,600ಚದರ ಅಡಿ ವಿಸ್ತೀರ್ಣದ ನಿವೇಶವೊಂದನ್ನು ಖರೀದಿಸಿದ್ದರು.

ಆದರೆ ಲೋಕಾಯುಕ್ತ ನ್ಯಾಯಾಮೂರ್ತಿಯವರು ಗೃಹ ನಿರ್ಮಾಣ ಸಹಕಾರಿ ಸಂಘದ ಉಪನಿಯಮಗಳನ್ನು ಉಲ್ಲಂಘಿಸಿ ತಲಾ ಒಂದು ನಿವೇಶನ ಪಡೆದುಕೊಂಡಿದ್ದರು.ಆದರೆ ನಿವೇಶನ ಕುರಿತ ವಿವಾದದ ಕಾವು ಏರುತ್ತಿದ್ದಂತೆಯೇ ಅನ್ನಪೂರ್ಣರವರು ನಾಗವಾರದ ತಮ್ಮ ನಿವೇಶನವನ್ನು ಸಂಘಕ್ಕೆ ಬುಧವಾರ ವಾಪಸ್ ನೀಡಿದ್ದಾರೆ, ನನ್ನ ವಿಶ್ವಾಸಾರ್ಹತೆಯನ್ನು ಯಾರೂ ಪ್ರಶ್ನಿಸಬಾರದು ಎಂಬ ಕಾರಣಕ್ಕೆ ಅನ್ನಪೂರ್ಣರವರು ನಿವೇಶನವನ್ನು ಹಿಂದಿರುಗಿಸಿದ್ದಾರೆ ಎಂದು ಪಾಟೀಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT