ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಬಲೆಗೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎರಡು ಪ್ರತ್ಯೇಕ ಲಂಚ ಪ್ರಕರಣಗಳಲ್ಲಿ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್, ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತು ಸಾರಿಗೆ ಇಲಾ ಖೆಯ ದ್ವಿತೀಯ ದರ್ಜೆ ಸಹಾಯಕನನ್ನು (ಎಸ್‌ಡಿಎ) ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೆಂಗಳೂರು ನಗರ ರೈಲ್ವೆ ಪೊಲೀಸ್ ಇನ್ಸ್ ಪೆಕ್ಟರ್ ಮೇರಿ ಶೈಲಜಾ, ಕಾನ್‌ಸ್ಟೆಬಲ್‌ಗಳಾದ ನಾಗ ರಾಜ್, ಮುದ್ದುವೀರೇಗೌಡ, ರಾಜ್ಯ ಸಾರಿಗೆ ಪ್ರಾಧಿಕಾರದ ಎಸ್‌ಡಿಎ ನರೇಶ್ ಬಂಧಿತರು.

ಚಿನ್ನದಂಗಡಿಯಲ್ಲಿ ಲಂಚ: ನಗರ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳನೊಬ್ಬನನ್ನು ಬಂಧಿಸಲಾಗಿತ್ತು. ತಾನು ಅರಸೀಕೆರೆಯಲ್ಲಿ 166 ಗ್ರಾಂ. ಚಿನ್ನ ಕಳವು ಮಾಡಿದ್ದು, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಶುಭಂ ಜ್ಯುವೆಲ್ಲರ್ಸ್‌ಗೆ ಮಾರಾಟ ಮಾಡಿರುವುದಾಗಿ ಆತ ತನಿಖೆಯ ವೇಳೆ ಪೊಲೀಸರಿಗೆ ತಿಳಿಸಿದ್ದ. ಬಳಿಕ ಜ್ಯುವೆಲ್ಲರಿಗೆ ತೆರಳಿದ್ದ ಇನ್‌ಸ್ಪೆಕ್ಟರ್ ಮೇರಿ ಶೈಲಜಾ, 166 ಗ್ರಾಂ. ಚಿನ್ನ ನೀಡುವಂತೆ ತಾಕೀತು ಮಾಡಿದ್ದರು. ಆದರೆ ತಾವು ಕಳ್ಳನಿಂದ ಚಿನ್ನ ಖರೀದಿಸಿಲ್ಲ ಎಂದು ಅಂಗಡಿಯ ಮಾಲೀಕರು ವಾದಿಸಿದ್ದರು. ನಂತರ ಅಂಗಡಿ ಮಾಲೀಕರ ಮೇಲೆ ಒತ್ತಡ ಹೇರಿದ್ದ ಇನ್‌ಸ್ಪೆಕ್ಟರ್, ಇಲ್ಲದಿದ್ದರೆ ಬಂಧಿಸುವ ಬೆದರಿಕೆ ಹಾಕಿದ್ದರು.

ನಂತರ 70 ಗ್ರಾಂ ಚಿನ್ನ ಮತ್ತು 50 ಸಾವಿರ ನಗದು ನೀಡುವಂತೆ ಸೂಚಿಸಿದ್ದರು. ಬಳಿಕ ನಡೆದ ಮಾತುಕತೆಯಲ್ಲಿ 70 ಗ್ರಾಂ. ಚಿನ್ನ ಮತ್ತು 40 ಸಾವಿರ ನಗದು ಪಡೆಯಲು ಮೇರಿ ಶೈಲಜಾ ಒಪ್ಪಿಕೊಂಡಿದ್ದರು. ನಗದು ಮೊತ್ತ ಲಂಚ ಎಂಬುದನ್ನು ಅಧಿಕಾರಿ ತಿಳಿಸಿದ್ದರು. ನಾಗರಾಜ್ ಮತ್ತು ಮುದ್ದು ವೀರೇಗೌಡ ಇನ್‌ಸ್ಪೆಕ್ಟರ್‌ಗೆ ಸಹಕಾರ ನೀಡುತ್ತಿದ್ದರು.

ಈ ಕುರಿತು ಶುಭಂ ಜ್ಯುವೆಲ್ಲರ್ಸ್ ಮಾಲೀಕ ವಿನೋದ್ ಜೈನ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ಲಂಚ ಪಡೆಯುತ್ತಿರು ವಾಗಲೇ ದಾಳಿ ನಡೆಸಿದ ಲೋಕಾ ಯುಕ್ತ ತನಿಖಾ ತಂಡ ಮೂವರನ್ನೂ ಬಂಧಿಸಿದೆ.ಎಸ್‌ಡಿಎ ಬಲೆಗೆ: ಗುಲ್ಬರ್ಗ ಜಿಲ್ಲೆಯ ಶಹಾಪುರದ ಜಾಕೀರ್ ಹುಸೇನ್ ಎಂಬುವರು ಟ್ರ್ಯಾಕ್ಟರ್ ಟ್ರಾಲಿ ತಯಾರಿಕೆ ಕಾರ್ಖಾನೆ ಆರಂಭಿಸಲು ಅನುಮತಿ ಕೋರಿ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಮುಂದಿನ ಪ್ರಕ್ರಿಯೆಗೆ ಕಳುಹಿ ಸಲು 18,000 ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಪ್ರಾಧಿಕಾರದ ಎಸ್‌ಡಿಎ ನರೇಶ್, ಮೊದಲ ಕಂತಿನಲ್ಲಿ ರೂ 6,000 ಪಡೆದಿದ್ದ. ನಂತರ ರೂ 7.5 ಸಾವಿರ ಪಡೆದು ಪ್ರಕ್ರಿಯೆ ಪೂರ್ಣಗೊಳಿಸಲು ಒಪ್ಪಿಕೊಂಡಿದ್ದ. ಈ ಬಗ್ಗೆ ಅರ್ಜಿದಾರರು ಬೆಂಗಳೂರು ನಗರ ಲೋಕಾ ಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಎಂ.ಎಸ್.ಬಿಲ್ಡಿಂಗ್‌ನ ಐದನೇ ಮಹಡಿಯಲ್ಲಿ ರುವ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ರೂ 7.5 ಸಾವಿರ ಲಂಚ ಪಡೆಯು ತ್ತಿದ್ದಾಗ ದಾಳಿ ನಡೆಸಿದ ಲೋಕಾ ಯುಕ್ತ ಪೊಲೀಸರು ನರೇಶ್‌ನನ್ನು ಬಂಧಿಸಿದ್ದು, ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT