ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತರ ಬಲೆಗೆ ತಹಶೀಲ್ದಾರ್ ಕಚೇರಿ ನೌಕರ

Last Updated 3 ಜುಲೈ 2013, 6:26 IST
ಅಕ್ಷರ ಗಾತ್ರ

ಬೆಳಗಾವಿ: ಜಮೀನಿನ ಕ್ಷೇತ್ರ ದುರಸ್ತಿ ಹಾಗೂ ವಾರಸಾದಲ್ಲಿ ತಿದ್ದುಪಡಿ ಮಾಡಿ ಸಿಕೊಡಲುರೂ 5000 ಲಂಚವನ್ನು ಪಡೆಯುತ್ತಿದ್ದ ಬೆಳಗಾವಿಯ ತಹಶೀಲ್ದಾರ್ ಕಚೇರಿಯ ಆರ್‌ಟಿಸಿ ಕೇಸ್ ವರ್ಕರ್ ಆನಂದ ಕೆಂಚಗಾರಟ್ಟಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಮಂಗಳವಾರ ಬಿದ್ದಿದ್ದಾನೆ.

ಸಾವಗಾಂವದ ರೈತ ಮಲ್ಲಪ್ಪ ಲಕ್ಷ್ಮಣ ಕದಂ ಎಂಬುವವರು ತಮ್ಮ 1 ಎಕರೆ 19 ಗುಂಟೆ ಜಮೀನಿನ ಕ್ಷೇತ್ರ ದುರಸ್ತಿ ಹಾಗೂ ವಾರಸಾದಲ್ಲಿ ತಿದ್ದುಪಡಿಗಾಗಿ ಅಟಲ್‌ಜಿ ಜನಸ್ನೇಹಿ ಕೇಂದ್ರದಲ್ಲಿ ಜನವರಿ 23 ರಂದುರೂ600 ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಇವರ ಅರ್ಜಿಯು ಉಪವಿಭಾಗಾಧಿಕಾರಿ ಕಚೇರಿಯಿಂದ ತಹಸೀಲ್ದಾರ ಕಚೇರಿಯ ಆರ್‌ಟಿಸಿ ವಿಭಾಗಕ್ಕೆ ಬಂದಿತ್ತು.

ಐದು ತಿಂಗಳಿಂದ ಕಡತವನ್ನು ಕೇಸ್ ವರ್ಕರ್ ಆನಂದ ಕೆಂಚಗಾರಟ್ಟಿ ವಿಲೇವಾರಿ ಮಾಡುತ್ತಿರಲಿಲ್ಲ. ಒಮ್ಮೆರೂ10 ಸಾವಿರ ಹಾಗೂ ಇನ್ನೊಮ್ಮೆರೂ6 ಸಾವಿರ ಲಂಚ ಪಡೆದು ಕೊಂಡಿದ್ದ. ಇನ್ನೂರೂ6000 ನೀಡುವಂತೆ ಬೇಡಿಕೆ ಇಟ್ಟಿದ್ದ. ರೈತನು ಪಾಲಿಕೆಯ ಸದಸ್ಯ ಸತೀಶ ದೇವರ ಪಾಟೀಲ ಅವರೊಂದಿಗೆ ಸೋಮವಾರ ಹೋಗಿ ವಿಚಾರಿಸಿದಾಗ,ರೂ5000 ನೀಡುವಂತೆ ಬೇಡಿಕೆ ಇಟ್ಟಿದ್ದ. ಈ ದೃಶ್ಯವನ್ನು ಚಿತ್ರೀಕರಿಸಿಕೊಂಡು ಬಂದಿದ್ದ ಮಲ್ಲಪ್ಪ ಕದಂ ಅವರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದರು.

ತಹಶೀಲ್ದಾರ್ ಕಚೇರಿಯಲ್ಲಿ ಮಲ್ಲಪ್ಪ ಅವರಿಂದ ಮಂಗಳವಾರ ಮಧ್ಯಾಹ್ನರೂ5000 ಲಂಚ ಪಡೆಯು ತ್ತಿದ್ದ ಆನಂದ ಕೆಂಚಗಾರಟ್ಟಿ ಲೋಕಾ ಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

ಲೋಕಾಯುಕ್ತ ಎಸ್ಪಿ ಶಾಂತನು ಸಿಹ್ನಾ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎಚ್.ಜಿ. ಪಾಟೀಲ ಹಾಗೂ ಜಿ.ಆರ್. ಪಾಟೀಲ, ಇನ್‌ಸ್ಪೆಕ್ಟರ್ ರಾಘವೇಂದ್ರ ಹವಾಲ್ದಾರ ಹಾಗೂ ಬಿ.ಎಸ್. ಪಾಟೀಲ ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT