ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತರಾಗಿ ಬನ್ನೂರುಮಠರೇ ಏಕೆ ಬೇಕು- ಮೊಯಿಲಿ ಪ್ರಶ್ನೆ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಮಂಗಳೂರು: `ಲೋಕಾಯುಕ್ತ ನೇಮಕ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯೇ ಇಲ್ಲ. ವಿವಾದಕ್ಕೆ ಸಿಲುಕಿರುವ ನ್ಯಾಯಮೂರ್ತಿ ಬನ್ನೂರುಮಠ ಅವರನ್ನೇ ಲೋಕಾಯುಕ್ತರಾಗಿ ನೇಮಿಸಬೇಕೆಂಬ ಹಠ ಏಕೆ?

ನಿಷ್ಕಳಂಕ ನ್ಯಾಯಮೂರ್ತಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಅವರಲ್ಲೇ ಕೆಲವರ ಹೆಸರನ್ನು ಸೂಚಿಸಿ ಶೀಘ್ರ ನೇಮಕಾತಿ ಮಾಡಬಾರದೇ?~ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಪ್ರಶ್ನಿಸಿದ್ದಾರೆ.

ನ್ಯಾ.ಬನ್ನೂರುಮಠ ಅವರೂ ಒಳ್ಳೆವರು. ಆದರೆ ಅವರ ಇತ್ತೀಚಿನ ವರ್ತನೆಗಳು ಆಕ್ಷೇಪಕ್ಕೆ ಒಳಗಾಗಿವೆ. ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ವ್ಯಕ್ತಿಗಳು ಸಾಕಷ್ಟು ಮಂದಿ ಇರುವಾಗ ಅವರನ್ನು ನೇಮಿಸಬಹುದು. ಈ ನಿಟ್ಟಿನಲ್ಲಿ ನ್ಯಾ. ವೆಂಕಟಾಚಲ, ನ್ಯಾ. ಸಂತೋಷ್ ಹೆಗ್ಡೆ ಅವರು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದಾರೆ ಎಂದು ಗುರುವಾರ ಇಲ್ಲಿ ಅವರು ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT