ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಪಗಳಿದ್ದರೆ ಸರಿಪಡಿಸಿ: ಸಲಹೆ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಆದರೆ, ಅದರಲ್ಲಿ ಏನಾದರೂ ಲೋಪದೋಷಗಳಿದ್ದಲ್ಲಿ ಅದನ್ನು ಸರಿಪಡಿಸಲು ಇನ್ನೊಂದು ಆಯೋಗವನ್ನು ರಚಿಸಬೇಕು~ ಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು (ಅಂಬೇಡ್ಕರ್ ವಾದ) ನಗರದಲ್ಲಿ ಭಾನುವಾರ ಏರ್ಪಡಿಸಿದ್ದ `ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಸಾಧಕ-ಬಾಧಕಗಳು~ ಕುರಿತಾದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಮೀಸಲಾತಿಯಿಂದ ಪರಿಶಿಷ್ಟ ಜಾತಿಗಳಿಗೆ ಅವರ ಜನಸಂಖ್ಯೆಗನುಗುಣವಾಗಿ ಸಿಗಬೇಕಾದ ಹಕ್ಕುಗಳು ಪೂರ್ಣವಾಗಿ ಅವರಿಗೆ ದೊರೆತಿಲ್ಲ. ಆದರೆ, ಈಗ ನೀಡುವ ಒಳಮೀಸಲಾತಿಯಿಂದ ಅತಿ ನಿಕೃಷ್ಟ ಪರಿಸ್ಥಿತಿಯಲ್ಲಿರುವ ಪರಿಶಿಷ್ಟ ಜಾತಿಯ ಅನೇಕ ಉಪಜಾತಿಗಳಿಗೆ ಅವರ ಹಕ್ಕುಗಳು ದೊರೆಯಬಹುದು~ ಎಂದರು.

`ಸಾಮಾಜಿಕ ನ್ಯಾಯವನ್ನು ಒಂದು ದಿನದಲ್ಲಿ ಅಥವಾ ಒಂದು ಕಾನೂನಿನಲ್ಲಿ ನೀಡಲಾಗುವುದಿಲ್ಲ. ಅದೊಂದು ನಿರಂತರ ಪ್ರಕ್ರಿಯೆಯಾಗಿದೆ. ಬರೀ ಮೀಸಲಾತಿಗಾಗಿ ಹೋರಾಟವನ್ನು ನಡೆಸದೆ, ಉನ್ನತ ಅಧಿಕಾರವನ್ನು ಹಿಡಿಯಲು ಎಲ್ಲರೂ ಒಗ್ಗೂಡಿ ಹೋರಾಟವನ್ನು ನಡೆಸಬೇಕು~ ಎಂದು ಹೇಳಿದರು.

`ಸರ್ಕಾರಿ ವಲಯಗಳಲ್ಲಿ ಮಾತ್ರ ಮೀಸಲಾತಿಯನ್ನು ನೀಡದೆ, ಖಾಸಗಿ ಕ್ಷೇತ್ರಗಳಲ್ಲಿಯೂ ಮೀಸಲಾತಿಯನ್ನು ನೀಡಬೇಕು. ಇದರಿಂದ ಖಾಸಗಿ ಕ್ಷೇತ್ರದಲ್ಲಿ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಇದಕ್ಕಾಗಿ ವ್ಯಾಪಕವಾಗಿ ಹೋರಾಟ ನಡೆಯಬೇಕು~ ಎಂದರು.

ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, `ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಸಮೀಕ್ಷೆಯ ವರದಿ ಪೂರ್ಣಾವಧಿ ಸಮೀಕ್ಷೆಯ ವರದಿಯಾಗಿಲ್ಲ. ಪ್ರಾಯೋಗಿಕವಾಗಿ ಸಮೀಕ್ಷೆಯಾಗಿಲ್ಲ. ಇನ್ನು ಹಲವು ಮಾಹಿತಿಗಳು ಕೈ ಬಿಟ್ಟು ಹೋಗಿವೆ. ಈಗ  ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ನಂತರ ಇನ್ನೊಂದು ಆಯೋಗವನ್ನು ರಚನೆ ಮಾಡಬೇಕು~ ಎಂದು ಎಲ್.ಹನುಮಂತಯ್ಯ ಅವರ ಮಾತನ್ನು ಪ್ರತಿಪಾದಿಸಿದರು.

`ಮೀಸಲಾತಿಯನ್ನು ನೀಡಿರುವ ಪ್ರತಿ ಜಾತಿ ಅಥವಾ ಪ್ರತಿ ವರ್ಗದಲ್ಲಿ ಬಲಿಷ್ಠವಾದ ಜಾತಿಗಳೇ ಮೇಲುಗೈಯನ್ನು ಸಾಧಿಸಿವೆ. ಇದರಿಂದ ಅಲ್ಲಿರುವ ಉಪಜಾತಿಗಳಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಈಗ ನೀಡುವ ಒಳ ಮೀಸಲಾತಿಯಿಂದ ಇನ್ನುಳಿದ ಉಪ ಜಾತಿಗಳಿಗೂ ಹಕ್ಕು ದೊರೆಯಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ಕೆ. ಟ್ರಸ್ಟ್‌ನ ಇಂದಿರಾ ಕೃಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮತ್ತಿತರ ದಲಿತ ಸಂಘರ್ಷ ಸಮಿತಿಯ ನಾಯಕರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT