ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಆರೋಪಿ ಬಂಧನ

Last Updated 11 ಜನವರಿ 2014, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸ ಕೊಡಿಸು­ವು­ದಾಗಿ ನಂಬಿಸಿ, ಹಲವರಿಂದ ಹಣ ಪಡೆದು ವಂಚಿಸಿದ್ದ ಮುಕುಂದ್‌ (30) ಎಂಬಾ­ತನನ್ನು ನಗರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

‘4ಡಿ ಟೆಕ್ನಾಲಜೀಸ್‌ ಲಿಮಿಟೆಡ್‌’ ಹೆಸರಿನ ಕಂಪೆನಿ ಆರಂಭಿಸಿದ್ದ ಮುಕುಂದ್‌, ನಿರುದ್ಯೋಗಿ ಪದವೀಧ­ರರಿಗೆ ಐಬಿಎಂ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ನೇತ್ರಾವತಿ ಎಂಬು­ವರಿಗೆ  ಐಬಿಎಂ  ಕಂಪೆನಿಯಲ್ಲಿ ಕೆಲಸ  ಕೊಡಿ­ಸು­ವುದಾಗಿ ನಂಬಿಸಿದ್ದ  ಆರೋಪಿ,  ಅವರಿಂದ ರೂ  1.25 ಲಕ್ಷ ಹಣ ಪಡೆದಿದ್ದ. ಬಳಿಕ  ಅವರಿಗೆ ನಕಲಿ  ನೇಮಕಾತಿ  ಪತ್ರ ನೀಡಿ ವಂಚಿಸಿದ್ದ. ಈ ಬಗ್ಗೆ ನೇತ್ರಾವತಿ ಅವರು ಹನುಮಂತ­ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮುಕುಂದ್‌ ತನ್ನ ಸಹಚರರಾದ ನವೀನ್‌, ಯಶವಂತ್‌, ಸಂದೀಪ್‌, ಉತ್ಕರ್ಷ್‌ ಗುಪ್ತಾ, ಅನಿಲ್‌ ದೇಶ್‌­ಮುಖ್‌ ಮತ್ತು ವಿಜಯ್‌ ಅನಂತ್‌ ಎಂಬುವರ ಜತೆ ಸೇರಿ ಹಲವರಿಗೆ ವಂಚಿಸಿದ್ದಾನೆ. ಇದಲ್ಲದೇ ಆರೋಪಿ­ಗಳು ಹಲವು ಕಂಪೆನಿಗಳಿಂದ ಡೇಟಾ ಆಪರೇಟಿಂಗ್‌ ಸೇವೆ ಪಡೆದು ಅವರಿಗೆ ಹಣ ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ತನ್ನ ಕಂಪೆನಿಯನ್ನು ಮುಚ್ಚಿದ್ದ ಮುಕುಂದ್‌, ಮೈಸೂರಿ­ನಲ್ಲಿ ತಲೆಮರೆಸಿಕೊಂಡಿದ್ದ. ಇತರೆ ಆರೋಪಿ­ಗಳು ದೆಹಲಿ, ಮುಂಬೈ ಮತ್ತಿತರ ಕಡೆಗಳಲ್ಲಿ ತಲೆಮರೆಸಿ­ಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT