ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ: ಬ್ಯಾಂಕಿಂಗ್ ಓಂಬುಡ್ಸಮನ್ ಜಾಗೃತಿ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ವಂಚಕರು ಬ್ಯಾಂಕಿಂಗ್ ಓಂಬುಡ್ಸ್‌ಮನ್, ಭಾರತೀಯ   ರಿಸರ್ವ್ ಬ್ಯಾಂಕ್, ಆದಾಯ ತೆರಿಗೆ ಇಲಾಖೆಯಿಂದ ಕಳುಹಿಸಿದಂತೆ ಇ-ಮೇಲ್ ಮತ್ತು ಎಸ್‌ಎಂಎಸ್‌ಗಳನ್ನು ಬ್ಯಾಂಕ್‌ಗಳ ಗ್ರಾಹಕರಿಗೆ ರವಾನಿಸಿ, ಅವರ ಖಾತೆ ಸಂಖ್ಯೆ, ವೈಯಕ್ತಿಕ ಗುರುತು ಸಂಖ್ಯೆ(ಪಿನ್) ಪಡೆದುಕೊಂಡು ವಂಚಿಸುತ್ತಿದ್ದಾರೆ. ಎಲ್ಲ ಬ್ಯಾಂಕ್‌ಗಳ ಖಾತೆದಾರರೂ ಈ ಬಗ್ಗೆ ಜಾಗ್ರತೆಯಿಂದ ಇರಬೇಕು ಬ್ಯಾಂಕಿಂಗ್ ಓಂಬುಡ್ಸ್‌ಮನ್ ಕಚೇರಿ ಎಚ್ಚರಿಸಿದೆ.

ಎಟಿಎಂ, ವಾಣಿಜ್ಯ ಮಳಿಗೆಯ ಕಾರ್ಡ್ ಸ್ವೈಪ್ ಯಂತ್ರ, ನೆಟ್ ಬ್ಯಾಂಕಿಂಗ್‌ನಲ್ಲಿ ನಿಮ್ಮ ಖಾತೆಯ ಹಣ ನಷ್ಟವಾಗುತ್ತಿದೆ ಎಂಬ ನಕಲಿ ಇ-ಮೇಲ್, ಎಸ್‌ಎಂಎಸ್‌ಗಳು ಬಂದರೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಬೇಡಿ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT