ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್! ಥಂಡರ್!

Last Updated 6 ಜನವರಿ 2011, 10:50 IST
ಅಕ್ಷರ ಗಾತ್ರ

ಇದು ವಂಡರ್‌ಲ್ಯಾಂಡ್. ನೋಡುವುದು ಇರಲಿ, ಹೆಸರು ಕೇಳಿದ ಕ್ಷಣ ಮಕ್ಕಳು ಮೈಮರೆಯುವುದು, ದೊಡ್ಡವರು ಹುಬ್ಬೇರಿಸುವುದು ಖರೆ. ಕೆನಡಾದ ಟೊರೊಂಟೊದ ವೊಗನ್ ಪ್ರದೇಶದಲ್ಲಿ 1981ರಲ್ಲಿಯೇ ಆರಂಭವಾದ ಈ ಅಮ್ಯೂಸ್‌ಮೆಂಟ್ ಪಾರ್ಕ್ ಇಂದಿಗೂ ರೋಲರ್ ಕೋಸ್ಟರ್‌ಗಳ (ಸುತ್ತುವ ಆಟದ ಯಂತ್ರ) ಭರಾಟೆಯಲ್ಲಿ ಎತ್ತಿದ ಕೈ.

ವರ್ಷದಲ್ಲಿ ಆರು ತಿಂಗಳು (ಮೇ ತಿಂಗಳಿಂದ ಅಕ್ಟೋಬರ್‌ವರೆಗೆ) ಮಾತ್ರ ತೆರೆದಿರುವ ಈ ವಂಡರ್‌ಲ್ಯಾಂಡ್‌ನಲ್ಲಿ ಕೃತಕ ಬೆಟ್ಟ, ಕೃತಕ ಸಮುದ್ರ, ಕೃತಕ ಜಲಪಾತಗಳಿವೆ. ಕೃತಕವಾದರೂ ನಿಜಸ್ವರೂಪ ಎನಿಸುವ ಥರಾವರಿ ನೋಟಗಳಿವೆ. ಅವುಗಳೊಂದಿಗೆ ಪಾಠಗಳೂ ಇವೆ.

ಇದರ ವಿಸ್ತೀರ್ಣ 330 ಎಕರೆ. ಈ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಮಕ್ಕಳಿಗಾಗಿಯೇ 200 ಆಕರ್ಷಕ ಆಟ-ನೋಟದ ವ್ಯವಸ್ಥೆಯಿದೆ. ಕಿಂಗ್ಸ್‌ವಿಲ್ಲೆ, ನಿಕೆಲೊಸೆನ್ ಸೆಂಟ್ರಲ್, ಹನ್ನಾ ಬಾರ್ಬರಾ ಲ್ಯಾಂಡ್ ಹೆಸರಿನ ಜಾಗಗಳಲ್ಲಿ ಮಕ್ಕಳಿಗೆ ರಂಜನೆಯ ಮೇಲೆ ರಂಜನೆ. ಕಿಂಗ್ಸ್‌ವುಡ್ ಮ್ಯೂಸಿಕ್ ಥಿಯೇಟರ್ ಕೂಡ ಅಲ್ಲಿದ್ದು, ಅಲ್ಲಿ ಸಾಂಸ್ಕೃತಿಕ ಹಬ್ಬಗಳು ನಡೆಯುತ್ತವೆ.

ಹದಿನೈದು ವಿಭಿನ್ನ, ವಿಚಿತ್ರ ಮಾದರಿಯ ರೋಲರ್ ಕೋಸ್ಟರ್‌ಗಳನ್ನು ಹೊಂದಿರುವ ವಿಶ್ವದ ಎರಡನೇ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಹೆಮ್ಮೆಗೆ ಇದು ಪಾತ್ರವಾಗಿದೆ. ಅಲ್ಲದೇ 20 ಎಕರೆಯಷ್ಟು ವಾಟರ್ ಪಾರ್ಕ್, 36 ಸಾವಿರ ಚದರ ಅಡಿಯ ಸಮುದ್ರ ಹೋಲುವ ಕೊಳ ಇಲ್ಲಿನ ಪ್ರಮುಖ ಆಕರ್ಷಣೆ. ಅಷ್ಟೇ ಅಲ್ಲದೇ ಎಂಟು ಮಾದರಿಯ ಥೀಮ್ ಪಾರ್ಕ್ ಕೂಡ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT