ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಡರ್‌ಲಾದಲ್ಲಿ ರಜೆಯ ಮೋಜು

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮಕ್ಕಳ ಪರೀಕ್ಷೆ ಮುಗಿದಿದೆ. ರಜೆಯ ಮಜವನ್ನು ಮಕ್ಕಳು ಖುಷಿಯಿಂದ ಅನುಭವಿಸುತ್ತಿದ್ದಾರೆ. ಮಕ್ಕಳ ಖುಷಿಯನ್ನು ಇಮ್ಮಡಿಗೊಳಿಸುವ ಸಲುವಾಗಿ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್ ಸಜ್ಜಾಗಿದೆ. ಪರೀಕ್ಷೆ ಬಿಡುವನ್ನು ಆನಂದಿಸಲು ವಂಡರ್‌ಲಾಗೆ ಬನ್ನಿ ಎಂದು ಕೈಬೀಸಿ ಕರೆಯುತ್ತಿದೆ. ಜತೆಗೆ ಮಕ್ಕಳಿಗೆ ವಿಶೇಷ ರಿಯಾಯಿತಿಯನ್ನೂ ಪ್ರಕಟಿಸಿದೆ.

ವಂಡರ್‌ಲಾ ಈ ಬೇಸಿಗೆಯಲ್ಲಿ ಮಕ್ಕಳಿಗಾಗಿ ಪ್ರವೇಶ ಟಿಕೆಟ್ ಮೇಲೆ ಶೇ 40 ರಿಯಾಯಿತಿ ನೀಡಲಿದೆ. ಈ ವರ್ಷ 10ನೇ ತರಗತಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಈ ರಿಯಾಯಿತಿ ಪಡೆದುಕೊಂಡ ವಿದ್ಯಾರ್ಥಿಗಳು ವಂಡರ್‌ಲಾಗೆ ಬಂದು ಭರಪೂರ ಮನರಂಜನೆ ಅನುಭವಿಸಬಹುದು.

ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್‌ನ ಜೆರಾಕ್ಸ್ ಪ್ರತಿ ತೋರಿಸಿ ಈ ರಿಯಾಯಿತಿ ಪಡೆಯಬಹುದಾಗಿದೆ. ಈ ಕೊಡುಗೆ ಮೇ 31ವರೆಗೆ ಮಾತ್ರ. ಹಾಗೆಯೇ, ವಂಡರ್‌ಲಾ ಕಾಲೇಜು ವಿದ್ಯಾರ್ಥಿಗಳಿಗೆ ಶೇ 25 ದರ ಕಡಿತ ಪ್ರಕಟಿಸಿದೆ. 22 ವರ್ಷ ವಯೋಮಿತಿಯ ಒಳಗಿನ ವಿದ್ಯಾರ್ಥಿಗಳು ತಮ್ಮ ಮೂಲ ಗುರುತಿನ ಚೀಟಿಯನ್ನು (ಐಡಿ ಕಾರ್ಡ್) ತೋರಿಸಿ ಈ ಸೌಲಭ್ಯ ಪಡೆಯಬಹುದು. ವಾರದ ಯಾವುದೇ ದಿನದಲ್ಲಿ ಈ ಸೌಲಭ್ಯ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT