ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲ ಸಿಂಗ್‌ ಹೇಳಿಕೆಗೆ ಆಕ್ರೋಶ

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರ­ಣ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಡಿಸೆಂಬರ್‌ 16ರ ಸಾಮೂಹಿಕ ಅತ್ಯಾಚಾರ ಪ್ರಕರ­ಣದ ಆರೋಪಿಗಳ ಪರ ವಕಾಲತ್ತು ವಹಿ­ಸಿದ್ದ ವಕೀಲ ಎ.ಪಿ. ಸಿಂಗ್‌ ಅವರ ಹೇಳಿ­ಕೆ ವಿವಾದದ ಬಿರುಗಾಳಿಯನ್ನು ಎಬ್ಬಿಸಿದೆ.

‘ನನ್ನ ಮಗಳೇನಾದರೂ ಮದುವೆಗೆ ಮೊದಲು ಲೈಂಗಿಕ ಸಂಪರ್ಕ ನಡೆಸಿದ್ದರೆ ಅಥವಾ ರಾತ್ರಿ ವೇಳೆ ಪ್ರಿಯಕರನ ಜತೆ ತಿರುಗಾಡಿದ್ದರೆ ಅವಳನ್ನು ಜೀವಂತವಾಗಿ ಸುಟ್ಟುಬಿಡುತ್ತಿದ್ದೆ’ ಎಂಬ ಸಿಂಗ್‌ ಅವರ ವಿವಾದಾತ್ಮಕ ಹೇಳಿಕೆಯು ಹೊಸ ರಾದ್ದಾಂತಕ್ಕೆ ಕಾರಣವಾಗಿದೆ.

ಕೆಲವು ಸ್ವಯಂ ಸೇವಾ ಸಂಘಟನೆಗಳು ಸೇರದಂತೆ ಅನೇಕ ಸಂಘ ಸಂಸ್ಥೆಗಳು ಸಿಂಗ್‌ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ದೆಹಲಿ ವಕೀ­ಲರ ಸಂಘಕ್ಕೆ ದೂರುಗಳನ್ನು ಸಲ್ಲಿಸಿವೆ.

ಸಿಂಗ್‌ ಹೇಳಿಕೆಯನ್ನು ಖಂಡಿಸಬೇಕು ಎಂದು ಈ ಸಂಘಟನೆಗಳು ಒತ್ತಾಯಿ­ಸಿವೆ. ಈ ಹಿನ್ನೆಲೆಯಲ್ಲಿ ವಕೀಲರ ಸಂಘವು ಸಿಂಗ್‌ ಅವರ ಹೇಳಿಕೆಯನ್ನು ಗಂಭೀರ­ವಾಗಿ ಪರಿಗಣಿಸಿದೆ.

ಈ ತಿಂಗಳ 20ರಂದು ನಡೆಯಲಿ­ರುವ ವಕೀಲರ ಸಂಘದ ಆಡಳಿತ ಮಂಡ­ಳಿಯ ಸಭೆಯಲ್ಲಿ ವಿಷಯವನ್ನು ಚರ್ಚಿಸ­ಲಾಗುವುದು ಎಂದು ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್‌ ಖತ್ರಿ ತಿಳಿಸಿದ್ದಾರೆ.

ವಕೀಲ ಸಿಂಗ್‌ ಹೇಳಿಕೆ ವೃತ್ತಿ ದುರ್ನ­ಡತೆ­ಯಾಗುತ್ತದೆ ಎಂದು ಹೇಳಿದ್ದಾರೆ.
ತ್ವರಿತ ನ್ಯಾಯಾಲಯ ಮರಣ­ದಂಡನೆ ಶಿಕ್ಷೆ ಪ್ರಕಟಿಸಿದ ನಂತರ ಸುದ್ದಿ­ಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತ, ‘ಪಾಲ­ಕರು ಹೆಣ್ಣು ಮಕ್ಕಳನ್ನು ರಾತ್ರಿ ಸ್ನೇಹಿತರ ಜತೆ ಅಡ್ಡಾಡಲು ಬಿಡಬಾರದು, ನನ್ನ ಮಗಳೇನಾದರೂ ಮದುವೆಗೆ ಮೊದಲು ಲೈಂಗಿಕ ಸಂಪರ್ಕ ನಡೆಸಿದ್ದರೆ ಅಥವಾ ರಾತ್ರಿ ವೇಳೆ ಪ್ರಿಯಕರನ ಜತೆ ತಿರುಗಾ­ಡಿದ್ದರೆ ಅವಳನ್ನು ಜೀವಂತವಾಗಿ ಸುಟ್ಟು­ಬಿಡುತ್ತಿದ್ದೆ’ ಎಂದು ಪರೋಕ್ಷವಾಗಿ ಅತ್ಯಾ­ಚಾರಕ್ಕೆ ಒಳಗಾಗಿ ಕೊಲೆಯಾದ ಯುವ­ತಿಯದೇ ತಪ್ಪು ಎಂಬರ್ಥದಲ್ಲಿ ಮಾತ­ನಾಡಿ ಸಿಂಗ್‌ ವಿವಾದ ಸೃಷ್ಟಿಸಿದ್ದಾರೆ.

ನ್ಯಾಯಾಂಗಕ್ಕೆ ಅವಮಾನ
ಸಾಮೂ­ಹಿಕ ಅತ್ಯಾಚಾರವೆಸಗಿದ ನಾಲ್ವರಿಗೆ ರಾಜ­ಕೀಯ ಒತ್ತಡದಿಂದಾಗಿ ಗಲ್ಲು ಶಿಕ್ಷೆ­ಯಾಗಿದೆ ಎಂಬ ಅಪರಾಧಿಗಳ ಪರ ವಕೀಲ ಸಿಂಗ್‌ ಹೇಳಿಕೆ  ನ್ಯಾಯಾಂಗವನ್ನು ಅವಮಾನಗೊಳಿಸಿದಂತೆ ಎಂದು ಕೊಲೆ­ಗೀಡಾದ ಯುವತಿ ತಂದೆ ತಿಳಿಸಿದ್ದಾರೆ.

‘ನನ್ನ ಮಗಳಿಗಾದದ್ದು ವಕೀಲರ ಮಗ­ಳಿಗೋ ಅಥವಾ ಸಂಬಂಧಿಕರಿಗೋ ಆಗಿ­ದ್ದರೆ ಇದೇ ನಿಲುವನ್ನು  ತಳೆಯುತ್ತಿದ್ದರೆ’ ಎಂದು ಅವರು ಪ್ರಶ್ನಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT