ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕರಿಗಷ್ಟೇ ಅಂಕಣ ಮೀಸಲು

Last Updated 10 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಬಾಗಲಕೋಟೆ ನವನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಆಧುನಿಕ ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಿ ದಶಕವೇ ಕಳೆದಿದೆ. ಆದರೆ, ಸೂಕ್ತ ತರಬೇತುದಾರರಿಲ್ಲದೆ, ಆಸಕ್ತ ಆಟಗಾರರಿಲ್ಲದೆ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಉದ್ದೇಶ ಈಡೇರಿಲ್ಲ.

2002ರಲ್ಲಿ ಉದ್ಘಾಟನೆಯಾಗಿರುವ ಒಳಾಂಗಣ ಕ್ರೀಡಾಂಗಣವನ್ನು ರೂ.30 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ, ಸಂಸದರ ನಿಧಿಯ 10 ಲಕ್ಷ ರೂಪಾಯಿ ಬಳಸಿ ಅತ್ಯುತ್ತಮವಾದ ಎರಡು ಷಟಲ್ ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಿಸಲಾಗಿದೆ.

ಇದರಲ್ಲಿ  `ಮುಳುಗಡೆ ನಗರಿ'ಯ ಸರ್ಕಾರಿ ಅಧಿಕಾರಿಗಳು, ವೈದ್ಯರು, ಎಂಜಿನಿಯರ್ ಮತ್ತು ಉದ್ಯಮಿಗಳು, ಹವ್ಯಾಸಿ ಆಟಗಾರರು ಸೇರಿದಂತೆ ಸುಮಾರು 30ಮಂದಿ ಮಧ್ಯವಯಸ್ಕರಷ್ಟೇ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಆಡುತ್ತಾರೆ. ಶುಲ್ಕ ಕಟ್ಟುವ ನೊಂದಾಯಿತ ಆಟಗಾರರಿಗೆ ಮಾತ್ರ ಇಲ್ಲಿ ಆಡಲು ಅವಕಾಶ.

ಒಂದೆರೆಡು ಬಾರಿ ರಾಜ್ಯ ಮಟ್ಟದ ಪೈಕಾ ಪಂದ್ಯಾವಳಿ, ಜಿಲ್ಲಾ ಮತ್ತು ಸ್ಥಳೀಯ ಮಟ್ಟದ ಕ್ರೀಡಾಕೂಟ ಇಲ್ಲಿ ನಡೆದಿರುವುದನ್ನು ಬಿಟ್ಟರೆ ಪ್ರಮುಖ ಕ್ರೀಡಾಕೂಟಗಳು ಇದುವರೆಗೂ ನಡೆದಿಲ್ಲ. ಜಿಲ್ಲೆಯಲ್ಲಿ ಷಟಲ್ ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟಕ್ಕೆ ಏರಿದ ಆಟಗಾರರು ಯಾರೂ ಇಲ್ಲ.

ಒಳಾಂಗಣ ಕ್ರೀಡಾಂಗಣದಲ್ಲಿ ಆಟವಾಡಿ ದಣಿಯುವ  ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಒಳಾಂಗಣ ಕ್ರೀಡಾಂಗಣ ಸುಣ್ಣ-ಬಣ್ಣ ಕಾಣದೆ ಗೋದಾಮಿನಂತೆ ಕಾಣುತ್ತಿದೆ.  ಪ್ರೇಕ್ಷಕರ ಗ್ಯಾಲರಿಯಲ್ಲಿ ದಟ್ಟ ದೂಳು ತುಂಬಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT