ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಕೊಟ್ಟರೆ ನಿಖಾ ಇಲ್ಲ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಪಟ್ನಾ (ಐಎಎನ್‌ಎಸ್‌): ವರದಕ್ಷಿಣೆ ಪಿಡುಗು ತೊಡೆದುಹಾಕುವ ನಿಟ್ಟಿನಲ್ಲಿ ಬಿಹಾರದ ಮುಸ್ಲಿಂ ಧಾರ್ಮಿಕ ನಾಯ­ಕರು  ನಿರ್ಧಾರ ಕೈಗೊಂಡಿದ್ದು, ವರ­ದಕ್ಷಿಣೆ ಕೇಳುವ ಮತ್ತು ಕೊಡುವವರ ವಿವಾಹದಲ್ಲಿ (ನಿಖಾ) ಪಾಲ್ಗೊಳ್ಳುವು­ದಿಲ್ಲ ಎಂದಿದ್ದಾರೆ..

ಮುಸ್ಲಿಮರಲ್ಲಿ ವರದಕ್ಷಿಣೆ ಪಿಡುಗು ಅವ್ಯಾಹತವಾಗಿ ವ್ಯಾಪಿಸುತ್ತಿರು­ವುದ­ರಿಂದ ಬಿಹಾರದ ನಳಂದಾ ಜಿಲ್ಲೆಯ ಮುಸ್ಲಿಂ ಧಾರ್ಮಿಕ ನಾಯಕರ  ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ.

‘ಯಾರು ವರದಕ್ಷಿಣೆ ಕೇಳುತ್ತಾರೊ ಮತ್ತು ಕೊಡುತ್ತಾರೊ ಅಂತಹವರ  ಮದುವೆ ನಡೆಸಿಕೊಡಬಾರದೆಂದು ನಿರ್ಧರಿಸಿದ್ದೇವೆ. ವರದಕ್ಷಿಣೆ ಪಿಡುಗನ್ನು ತೊಡೆದುಹಾಕಲು ಮತ್ತು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆ’ ಎಂದು ನಳಂದಾದ ಇಮಾರತೆ ಶರಿಯಾದ ಮುಖ್ಯಸ್ಥ ಕ್ವಾಜಿ ಮೌಲಾನ ಮನ್ಸೂರ್‌ ಆಲಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT