ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ದೂರು ವಜಾ ಸಲ್ಲದು: ಸುಪ್ರೀಂ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಮಾಜದಲ್ಲಿ ವರದಕ್ಷಿಣೆ ಸಂಸ್ಕೃತಿ ಬೆಳೆಯುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ದೃಢವಾಗಿ ನಿಭಾಯಿಸಬೇಕು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪ್ರಕರಣ ದಾಖಲಿಸುವಾಗ ವಿಳಂಬ­ವಾಗಿದೆ ಎಂಬ ಕಾರಣಕ್ಕೆ ಮಹಿಳೆಯರು ನೀಡುವ ವರದಕ್ಷಿಣೆ ಕಿರುಕುಳದ ದೂರು­ಗಳನ್ನು ಕೋರ್ಟ್‌­ಗಳು ವಜಾ­ಗೊಳಿ­ಸಬಾರದು ಎಂದು ನ್ಯಾಯ­ಮೂರ್ತಿ­ಗಳು ಸಲಹೆ ನೀಡಿದ್ದಾರೆ.

ವರದಕ್ಷಿಣೆ ನಾಚಿಕೆಗೇಡು ಮತ್ತು ಯಾತನಾಮಯವಾದ ವಾಸ್ತವ ಎಂದು ನ್ಯಾಯಮೂರ್ತಿಗಳಾದ ಟಿ.ಎಸ್‌.­ಠಾಕೂರ್‌ ಮತ್ತು ವಿಕ್ರಮಜಿತ್‌ ಸೇನ್‌ ಅವರ­ನ್ನೊಳಗೊಂಡ ಪೀಠ ಹೇಳಿದೆ.

ವರದಕ್ಷಿಣೆ ಕಿರುಕುಳ ವಿರುದ್ಧದ ಸಜೆ ಅವಕಾಶ­ಗಳನ್ನು  ದುರುಪಯೋಗ­ಪಡಿಸಿ­ಕೊ­ಳ್ಳಲಾಗುತ್ತಿದೆ ಎಂದೂ ಪೀಠ ಹೇಳಿದೆ. ವರದಕ್ಷಿಣೆಯ ನಾಚಿಕೆಗೇಡು ಮತ್ತು ವೇದನಾಮಯ ವಾಸ್ತವದ ಬಗ್ಗೆ ನ್ಯಾಯಾ­ಧೀಶರು ಕುರುಡಾಗಬಾರದು ಎಂದು ಪೀಠ ಸಲಹೆ ನೀಡಿದೆ. ಈ ಪಿಡುಗು ಎಲ್ಲ ಧಾರ್ಮಿಕ ಸಮುದಾಯ­ಗಳಲ್ಲೂ ಹರಡುತ್ತಿರುವ ಬಗ್ಗೆ ಪೀಠ ಕಳವಳ ವ್ಯಕ್ತಪಡಿಸಿದೆ.

ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಕುಮ್ಮಕ್ಕು ಪ್ರಕರಣವನ್ನು ಕೈಬಿಡುವಂತೆ ಆರೋಪಿ ಮತ್ತು ಆತನ ಕುಟುಂಬ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪೀಠ ಈ ತೀರ್ಪು ನೀಡಿದೆ. ಅರ್ಜಿಯನ್ನು ವಜಾಗೊಳಿಸಿ ಪ್ರಕರಣದ ತನಿಖೆ ಮುಂದುವರಿಸಲು ಕೋರ್ಟ್‌ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT