ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಿಗಾರರನ್ನು ಹೊರ ತಳ್ಳಿದ ವಕೀಲರು

Last Updated 12 ಸೆಪ್ಟೆಂಬರ್ 2011, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳನ್ನು ವಕೀಲರು ನ್ಯಾಯಾಧೀಶರ ಎದುರೇ ಎಳೆದಾಡಿ ಹೊರ ದಬ್ಬಿದ ಘಟನೆ ನಗರದ ನೃಪತುಂಗ ರಸ್ತೆಯ ಒಂದನೇ ಎಸಿಎಂಎಂ ನ್ಯಾಯಾಲಯದ ಆವರ ಣದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರು ನ್ಯಾಯಾಲಯದ ಕೊಠಡಿಗೆ ಪ್ರವೇಶಿಸುವ ಮುನ್ನವೇ ಸಾಕಷ್ಟು ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೊಠಡಿಯಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ ವಕೀಲರು ಮಾಧ್ಯಮ ಪ್ರತಿನಿಧಿ ಗಳೊಂದಿಗೆ ವಾಗ್ವಾದ ನಡೆಸಿ ಕೊಠಡಿಯಿಂದ ಹೊರ ಹೋಗುವಂತೆ ಬೆದರಿಕೆ ಹಾಕಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಧ್ಯಮ ಪ್ರತಿನಿಧಿಗಳನ್ನು ವಕೀಲರು ಎಳೆದಾಡಿದರು.

ಇದೇ ವೇಳೆಗೆ ಕೊಠಡಿ ಪ್ರವೇಶಿಸಿದ ನ್ಯಾಯಾಧೀಶರ ಎದುರೇ ವಕೀಲರು ಮಾಧ್ಯಮ ಪ್ರತಿನಿಧಿಗಳನ್ನು ಕೊಠಡಿ ಯಿಂದ ಹೊರ ದಬ್ಬಿದರು. ಅಲ್ಲದೇ ನ್ಯಾಯಾಲಯದ ಆವರಣಕ್ಕೆ ಎಳೆದೊಯ್ದು ಬಟ್ಟೆಗಳನ್ನು ಹರಿದು ಹಾಕಿ ಥಳಿಸಿದರು.

ವಿವಸ್ತ್ರಗೊಳಿಸುವ ಬೆದರಿಕೆ: ವಿಚಾರಣೆಗೆ ಹಾಜರಾಗಲು ಬಂದಿದ್ದ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ನ್ಯಾಯಾಲಯದ ಕಟ್ಟಡವನ್ನು ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣ ಮಾಡಲು ಮುಂದಾದ ಮಾಧ್ಯಮ ಛಾಯಾಗ್ರಾಹಕರ ಮೇಲೂ ವಕೀಲರು ಹಲ್ಲೆ ನಡೆಸಿದರು. ಅಲ್ಲದೇ ಕ್ಯಾಮೆರಾಗಳನ್ನು ಕಸಿದು ಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿ ಜಗಳ ಪರಿಹರಿಸಲು ಮುಂದಾದ ವರದಿಗಾ ರ್ತಿಯ ಜತೆ ಕೆಲ ವಕೀಲರು ಅನುಚಿತ ವಾಗಿ ವರ್ತಿಸಿದರು. ಇದರಿಂದಾಗಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಹಂತದಲ್ಲಿ ವಕೀಲರ ಗುಂಪೊಂದು ವರದಿಗಾರ್ತಿಯನ್ನು ವಿವಸ್ತ್ರಗೊಳಿ ಸುವುದಾಗಿ ಬೆದರಿಕೆ ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT