ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರನಟನ ಚಿತ್ರೋತ್ಸವ

Last Updated 18 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

‘ರಂಗ ಜಂಗಮ’ ಸಂಸ್ಥೆ ಬುಧವಾರದಿಂದ ಐದು ದಿನ ವರನಟ ದಿ. ರಾಜಕುಮಾರ್ ನೆನಪಿನಲ್ಲಿ ಚಿತ್ರೋತ್ಸವ, ರಾಜ್ ನಡೆದು ಬಂದ ಹಾದಿಯ ಅವಲೋಕನದ ಸಾಕ್ಷ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮೇಕಪ್ ಕೃಷ್ಣ ಅವರು ಡಾ. ರಾಜ್‌ಗೆ ಅನೇಕ ಚಿತ್ರಗಳಲ್ಲಿ ಮೇಕಪ್ ಮಾಡಿದವರು, ಹತ್ತಿರದಿಂದ ಬಲ್ಲವರು. ಹೀಗಾಗಿ ತಮ್ಮ ಪ್ರೀತಿಯ ನಟನ ನೆನಪಿನಲ್ಲಿ ‘ಡಾ. ರಾಜ್ ಜೀವನಧಾರೆ- ಮೇರು ನಟ ನಡೆದು ಬಂದ ದಾರಿ’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಉದ್ಘಾಟನೆ, ಅತಿಥಿಗಳು: ಲಕ್ಷ್ಮೀನಾರಾಯಣ, ಡಾ. ದೊಡ್ಡರಂಗೇಗೌಡ, ಜಯಂತಿ, ರಾಘವೇಂದ್ರ ರಾಜ್‌ಕುಮಾರ್, ಮಮತಾ ರಾವ್, ರಕ್ಷಿತಾ ಪ್ರೇಮ್, ಎಸ್.ಕೆ. ಭಗವಾನ್, ಅಭಿನಯ. ಬೆಳಿಗ್ಗೆ 11 ಗಂಟೆಗೆ ಡಾ. ರಾಜ್ ಜೀವನಧಾರೆ ಭಾಗ-1 ಪ್ರದರ್ಶನ, ಮಧ್ಯಾಹ್ನ 1.30ಕ್ಕೆ ‘ಸತ್ಯ ಹರಿಶ್ಚಂದ್ರ’ ಸಂಜೆ 6ಕ್ಕೆ ‘ಶಂಕರ್ ಗುರು’ ಚಲನಚಿತ್ರ ಪ್ರದರ್ಶನ. ಈ ಸಂದರ್ಭದಲ್ಲಿ ರಾಜ್ ಕುಟುಂಬದವರು, ಆಪ್ತರು, ನಿರ್ಮಾಪಕರು, ನಿರ್ದೇಶಕರು ನೆನಪುಗಳನ್ನು ಹಂಚಿಕೊಳ್ಳುವರು.
ಸ್ಥಳ: ಪ್ರಿಯದರ್ಶಿನಿ ಸಭಾಂಗಣ, ಬಾದಾಮಿ ಹೌಸ್, ಕಾರ್ಪೋರೇಷನ್ ಮುಂಭಾಗ.                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT