ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆಗೆ ಅರ್ಜಿಯ ನಾಟಕ ಏಕೆ?

Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಈ ತಿಂಗಳ 8ರ ಪ್ರ.ವಾ.ಯಲ್ಲಿ ಪ್ರಕಟವಾದ  ‘ವರ್ಗಾವಣೆ ನಿಂತಿಲ್ಲ’ ಲೇಖನ ನೂರಕ್ಕೆ ನೂರರಷ್ಟು ಸತ್ಯ. 2006, 2007, 2009ರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ  ಸೇರಿದ ನನ್ನ ಅನೇಕ ಸ್ನೇಹಿತರಿಗೆ ಈ ಸಲದ ವರ್ಗಾವಣೆ ಆಘಾತ ತಂದಿದೆ.

ವರ್ಗಾವಣೆಗೆ ಅರ್ಜಿ ಆಹ್ವಾನಿಸಿದ ಇಲಾಖೆಯು ಒಂದೇ ಒಂದು ವರ್ಗಾ­ವಣೆ­ಯನ್ನೂ ಯಥೋಚಿತ  ಮಾಡಿ­ದಂತೆ ಕಂಡುಬರುವುದಿಲ್ಲ. ಅರ್ಜಿ ಹಾಕಿ ವರ್ಗಾ­ವಣೆಗೆ ಕಾಯುತ್ತಿರುವವರಿಗೆ ವರ್ಗಾವಣೆ ಇಲ್ಲ. ಆದರೆ ಈ ನಡುವೆ ಕೆಲವು ಸ್ನೇಹಿತರು ಬೆಂಗಳೂರಿನ ನಿರ್ದೇಶಕರ ಕಚೇರಿ, ಆಯುಕ್ತರ ಕಚೇರಿ, ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕೈ ಬೆಚ್ಚಗೆ  ಮಾಡಿ ಬಂದ­ವರು ಮಾತ್ರ ತಮ್ಮ ಇಷ್ಟದ ಸ್ಥಳಗಳಿಗೆ ವರ್ಗಾವಣೆ ಆಗಿರುತ್ತಾರೆ.

ನಮ್ಮನ್ನು ಹಂಗಿಸುವ ಹಾಗೆ ಗತ್ತಿನಿಂದ ವರ್ಗಾವಣೆ­ಗೊಂಡಿ­ದ್ದಾರೆ. ಪ್ರಾಮಾಣಿಕ­ರನ್ನು  ಕೇಳುವವರು ಯಾರೂ ಇಲ್ಲ! ಉನ್ನತ ಶಿಕ್ಷಣ ಇಲಾಖೆ  ಲಂಚ ಪಟ್ಟಿಯನ್ನೇ ಪ್ರಕಟಿಸಲಿ. ಬೆಂಗ­ಳೂರು, ಮೈಸೂರು, ಹುಬ್ಬಳ್ಳಿ, ಮಂಗ­ಳೂರಿಗೆ ಇಷ್ಟು, ಜಿಲ್ಲಾ ಕೇಂದ್ರ­ಗಳಿಗೆ ಇಷ್ಟು. ತಾಲ್ಲೂಕು ಕೇಂದ್ರಗಳಿಗೆ ಇಷ್ಟು ಎಂದು ಲಂಚದ ವಿವರ ಪ್ರಕಟಿ­ಸಿದರೆ ಅನುಕೂಲ­ವಾಗುತ್ತದೆ.   ಈ ಅರ್ಜಿ ನಾಟಕ ಏಕೆ?
–ನೊಂದ ಪ್ರಾಧ್ಯಾಪಕ, ಕೆ.ಆರ್‌.ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT